ಅಪಾರವಾದ ವನ್ಯಸಂಪತ್ತಿನಿಂದ ಕಂಗೊಳಿಸುವ ಮಧ್ಯ ಪ್ರದೇಶದ ಬಾಂಧವಗಡ ರಾಷ್ಟ್ರೀಯ ಉದ್ಯಾನದಲ್ಲಿರುವ ಉಮಾರಿಯಾ ಪ್ರದೇಶವು ಪೌರಾಣಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಇಲ್ಲಿನ ಬಾಂಧವಗಡ ಕೋಟೆಯಲ್ಲಿರುವ ಅನೇಕ ಅವಶೇಷಗಳು ಸಾವಿರಾರು ವರ್ಷಗಳಷ್ಟು ಹಳೆಯವಾಗಿದ್ದು, ರಾಮಾಯಣದ ಯುಗಕ್ಕೆ ಸೇರಿವೆ ಎನ್ನಲಾಗುತ್ತಿದೆ. ಇಲ್ಲಿನ ತಲಾ ಕೊಳಕ್ಕೆ ನೀರಿನ ಮೂಲವಾಗಿರುವ ಚಕ್ರಧಾರಾ ಝರಿ ಉಗಮಿಸುವ ಜಾಗದಲ್ಲಿ ಮಲಗಿರುವ ವಿಷ್ಣುವಿನ ಶಿಲಾ ಪ್ರತಿಮೆ ಇದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್, ಈ ಪ್ರತಿಮೆ ಬಗಲಲ್ಲಿ ಇರುವ ಕೊಳದಲ್ಲಿ ಅಪಾರ ಪ್ರಮಾಣದಲ್ಲಿ ಸಯಾನೋ ಬ್ಯಾಕ್ಟೀರಿಯಾಗಳು ಇದ್ದು ಅವುಗಳು ದೊಡ್ಡ ಮಟ್ಟದಲ್ಲಿ ಆಮ್ಲಜನಕ ಉತ್ಪತ್ತಿ ಮಾಡುತ್ತವೆ ಎಂದಿದ್ದು, ಜೌಗು ಪ್ರದೇಶಗಳ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.