ಕೊರೊನಾ ವೈರಸ್ ಪೀಡಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡಲಾಗ್ತಿದೆ. ಹೋಂ ಐಸೋಲೇಷನ್ ನಲ್ಲಿರುವವರಿಗೆ ಈ ಮಾತ್ರೆಯನ್ನು ನೀಡಲಾಗ್ತಿದೆ. ಇದು ಕೊರೊನಾ ವೈರಸ್ ಕೊಲ್ಲುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಆದ್ರೆ ವೈದ್ಯರ ಸೂಚನೆಯಿಲ್ಲದೆ ಈ ಮಾತ್ರೆ ಸೇವನೆಯನ್ನು ನಿಷೇಧಿಸಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಈ ಮಾತ್ರೆ ನೀಡಲಾಗ್ತಿಲ್ಲ. ಪರೀಕ್ಷೆಯಲ್ಲಿ ಔಷಧಿ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
ಈ ಮಾತ್ರೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆದ್ರೆ ಸಂಪೂರ್ಣ ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಪುರಾವೆಯಿಲ್ಲ. ಇದ್ರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಐವರ್ಮೆಕ್ಟಿನ್ ಔಷಧಿ ಪರಿಣಾಮಕಾರಿ ಎಂದು ಸಿಎಮ್ಒ ಬಹಿರಂಗಪಡಿಸಿದ ನಂತರ ಗುರುವಾರ ಔಷಧಿ ಅಂಗಡಿಗಳಲ್ಲಿ ಈ ಮಾತ್ರೆ ಕಾಣೆಯಾಗಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ಕಾಳಸಂತೆ ಮಾರಾಟ ಜಾಸ್ತಿಯಾಗಿದೆ. ಬುಧವಾರ ಎಲ್ಲರಿಗೂ ಈ ಮಾತ್ರೆ ನೀಡಬಹುದೆಂದು ಸೂಚನೆ ನೀಡಲಾಗಿತ್ತು. ಇದ್ರಿಂದ ಲಕ್ನೋದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಗುರುವಾರ ಮತ್ತೆ ಹೊಸ ಸೂಚನೆ ನೀಡಲಾಗಿದೆ. ಕೊರೊನಾ ರೋಗಿಗಳಿಗೆ ಮಾತ್ರ ಔಷಧಿ ನೀಡಬೇಕೆಂದು ಸೂಚಿಸಲಾಗಿದೆ.