ಅಹಮದಾಬಾದ್ ನ ಸಬರಮತಿ ನದಿ ದಂಡೆಯಲ್ಲಿರುವ ದಾಧಿಚಿ ರಿಶಿ ಆಶ್ರಮದ ಬಳಿ ನೂರಾರು ಭಕ್ತರು ವಿಶೇಷ ಕಾಣಿಕೆಗಳೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.
ಅಘೋರಿ ದಾದಾನ ಸಮಾಧಿ ಎನ್ನಲಾದ ಈ ಜಾಗಕ್ಕೆ ಪ್ರತಿ ಗುರುವಾರದಂದು ಭಕ್ತರು ಸಿಗರೇಟುಗಳು ಹಾಗೂ ಗುಲಾಬಿಗಳೊಂದಿಗೆ ಬರುತ್ತಾರೆ. ಕೊರೊನಾ ವೈರಸ್ ಸಾಂಕ್ರಮಿಕದ ನಡುವೆಯೂ ಈ ಸಂಪ್ರದಾಯ ಮುಂದುವರೆದಿದೆ.
ಅಹಮದಾಬಾದ್ ನಗರ ಸ್ಥಾಪನೆಯಾಗುವ ಮುಂಚಿನಿಂದಲೂ ಇರುವ ಈ ಆಶ್ರಮಕ್ಕೆ ಬರುವ ಯಾವುದೇ ಭಕ್ತನೂ ಸಹ ತನ್ನ ಸಾಮಾಜಿಕ ಸ್ಥಾನಮಾನಗಳು ಏನೇ ಇದ್ದರೂ ಅಗ್ಗದ ಸಿಗರೇಟುಗಳನ್ನೇ ದಾನ ಮಾಡಬೇಕಾಗುತ್ತದೆ. ಅಘೋರಿಗಳಿಗೆ ಹಿಂದೆ ಚರಸ್ ಹಾಗೂ ಗಾಂಜಾಗಳನ್ನು ಕಾಣಿಕೆಯನ್ನಾಗಿ ನೀಡಲಾಗುತ್ತಿತ್ತು. ಆದರೆ ಆ ವಸ್ತುಗಳನ್ನು ನಿಷೇಧ ಮಾಡಿದ ಬಳಿಕ ಇದೀಗ ಸಿಗರೇಟುಗಳನ್ನು ಕಾಣಿಕೆಯನ್ನಾಗಿ ಕೊಡಲಾಗುತ್ತಿದೆ.