alex Certify ಬೆಚ್ಚಿಬೀಳಿಸುವಂತಿದೆ ಚಾರ್​ ಮಿನಾರ್​ ನೋಡುವ ಆಸೆಯಲ್ಲಿ ಮಕ್ಕಳು ಮಾಡಿದ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಚಾರ್​ ಮಿನಾರ್​ ನೋಡುವ ಆಸೆಯಲ್ಲಿ ಮಕ್ಕಳು ಮಾಡಿದ ಕೆಲಸ…!

ಚಾರ್​ಮಿನಾರ್​​ ನೋಡಬೇಕೆಂಬ ಆಸೆಯಿಂದ ಮನೆಯವರಿಗೆ ಮಾಹಿತಿ ನೀಡದೇ 6.50 ಲಕ್ಷ ರೂಪಾಯಿ ತೆಗೆದುಕೊಂಡು ನಾಪತ್ತೆಯಾಗಿದ್ದ 8 ಮಂದಿ ಅಪ್ರಾಪ್ತ ಮಕ್ಕಳನ್ನ ಆಟೋ ಚಾಲಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂಕ್ತ ತನಿಖೆ ನಡೆಸಿದ ಹೈದರಾಬಾದ್​ ಪೊಲೀಸರು ಮಕ್ಕಳು ಹಾಗೂ ನಗದನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಆಂಧ್ರಪ್ರದೇಶದ ಕಡಪಾ ಮೂಲದ ಮಕ್ಕಳು 2 ದಿನಗಳ ಹಿಂದೆ ತಮ್ಮ ಮನೆಯಿಂದ ಕಾಣೆಯಾಗಿದ್ದರು. ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ 8 ಮಂದಿ ಅಪ್ರಾಪ್ತರು ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕಾಲ್ನಡಿಗೆ ಮೂಲಕ ಅಫ್ಜಲ್​ಗುಂಜ್​ ತಲುಪಿದ್ದರು.

ದಾರಿಹೋಕರ ಬಳಿ ಚಾರ್​ಮಿನಾರ್​ಗೆ ಹೋಗುವ ದಾರಿಯನ್ನ ಕೇಳುತ್ತಿದ್ದ ಮಕ್ಕಳನ್ನ ಆಟೋ ಚಾಲಕರು ಗಮನಿಸಿದ್ದರು. ಕೊನೆಗೆ ಆಟೋದಲ್ಲಿ ಚಾರ್​ ಮಿನಾರ್​ಗೆ ಹೋಗಲು ನಿರ್ಧರಿಸಿದ ಮಕ್ಕಳು ಆಟೋ ಚಾಲಕನಿಗೆ 2 ಸಾವಿರ ರೂಪಾಯಿ ನೋಟುಗಳನ್ನ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಆಟೋ ಚಾಲಕ ಮಕ್ಕಳನ್ನ ಚಾರ್​ ಮಿನಾರ್​ಗೆ ಕರೆದೊಯ್ಯುವ ಬದಲು ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...