alex Certify ತಾಯಿ ಮಮತೆ ಅಂದ್ರೆ ಇದೇ ಅಲ್ವಾ…? ಆಕ್ಸಿಜನ್​ ಸಪೋರ್ಟ್ ​ನಲ್ಲಿದ್ದರೂ ಅಡುಗೆ ಮಾಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಮಮತೆ ಅಂದ್ರೆ ಇದೇ ಅಲ್ವಾ…? ಆಕ್ಸಿಜನ್​ ಸಪೋರ್ಟ್ ​ನಲ್ಲಿದ್ದರೂ ಅಡುಗೆ ಮಾಡಿದ ಮಹಿಳೆ

ವೈದ್ಯಕೀಯ ಆಮ್ಲಜನಕದ ಸಪೋರ್ಟ್​ನಲ್ಲಿ ಉಸಿರಾಡುತ್ತಿರುವ ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ಫೋಟೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಪರ – ವಿರೋಧದ ಚರ್ಚೆಯನ್ನ ಹುಟ್ಟು ಹಾಕಿದೆ.

ಈ ಫೋಟೋ ನೋಡಿದ ಅನೇಕರು ತಾಯಿ ಎಂತಹ ಕಷ್ಟದ ಸಂದರ್ಭದಲ್ಲಿಯೂ ತನ್ನ ಕರ್ತವ್ಯದಿಂದ ಹಿಂದೆ ಸರಿಯೋದಿಲ್ಲ ಎಂದು ಹೇಳಿದ್ದಾರೆ. ಇನ್ನು ಹಲವರು ಎಂತಹ ಕಷ್ಟದ ಸಂದರ್ಭದಲ್ಲಿ ಮಹಿಳೆಯರು ಮಾತ್ರ ಇನ್ನೊಬ್ಬರಿಗಾಗಿಯೇ ಬದುಕಬೇಕಾದ ಅನಿವಾರ್ಯತೆಯನ್ನ ಈ ಸಮಾಜ ಸೃಷ್ಟಿಸಿದೆ ಎಂದು ಕುಟುಕಿದ್ದಾರೆ.

ವೈರಲ್​ ಆಗಿರುವ ಫೋಟೋದಲ್ಲಿ ಆಕ್ಸಿಜನ್​ ಸಾಂದ್ರಕದ ಮೂಲಕ ವೈದ್ಯಕೀಯ ಆಮ್ಲಜನಕವನ್ನ ಸ್ವೀಕರಿಸುತ್ತಿರುವ ಮಹಿಳೆ ಸ್ಟೌನಲ್ಲಿ ಚಪಾತಿಯನ್ನ ಮಾಡುತ್ತಿದ್ದಾರೆ.

ಈ ಫೋಟೋದಲ್ಲಿ ಆಕೆ ಕೆಲಸ ಮಾಡುತ್ತಿದ್ದರೂ ಆಕೆಯ ಸುತ್ತ ಸಹಾಯಕ್ಕೆ ಯಾರೂ ಇಲ್ಲದೇ ಇರೋದನ್ನ ನೀವು ಕಾಣಬಹುದಾಗಿದೆ.

ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಇಂತಹ ಕಷ್ಟದ ಸಂದರ್ಭದಲ್ಲೂ ಮಹಿಳೆಗೆ ಕೆಲಸ ಮಾಡಲು ಹೇಳಿರೋದು ನಿಜಕ್ಕೂ ಕ್ರೂರ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

— Navin Noronha ?? (@HouseOfNoronha) May 21, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...