ತಾಯಿ ಮಮತೆ ಅಂದ್ರೆ ಇದೇ ಅಲ್ವಾ…? ಆಕ್ಸಿಜನ್ ಸಪೋರ್ಟ್ ನಲ್ಲಿದ್ದರೂ ಅಡುಗೆ ಮಾಡಿದ ಮಹಿಳೆ 22-05-2021 8:18PM IST / No Comments / Posted In: Corona, Corona Virus News, Latest News, India ವೈದ್ಯಕೀಯ ಆಮ್ಲಜನಕದ ಸಪೋರ್ಟ್ನಲ್ಲಿ ಉಸಿರಾಡುತ್ತಿರುವ ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪರ – ವಿರೋಧದ ಚರ್ಚೆಯನ್ನ ಹುಟ್ಟು ಹಾಕಿದೆ. ಈ ಫೋಟೋ ನೋಡಿದ ಅನೇಕರು ತಾಯಿ ಎಂತಹ ಕಷ್ಟದ ಸಂದರ್ಭದಲ್ಲಿಯೂ ತನ್ನ ಕರ್ತವ್ಯದಿಂದ ಹಿಂದೆ ಸರಿಯೋದಿಲ್ಲ ಎಂದು ಹೇಳಿದ್ದಾರೆ. ಇನ್ನು ಹಲವರು ಎಂತಹ ಕಷ್ಟದ ಸಂದರ್ಭದಲ್ಲಿ ಮಹಿಳೆಯರು ಮಾತ್ರ ಇನ್ನೊಬ್ಬರಿಗಾಗಿಯೇ ಬದುಕಬೇಕಾದ ಅನಿವಾರ್ಯತೆಯನ್ನ ಈ ಸಮಾಜ ಸೃಷ್ಟಿಸಿದೆ ಎಂದು ಕುಟುಕಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿ ಆಕ್ಸಿಜನ್ ಸಾಂದ್ರಕದ ಮೂಲಕ ವೈದ್ಯಕೀಯ ಆಮ್ಲಜನಕವನ್ನ ಸ್ವೀಕರಿಸುತ್ತಿರುವ ಮಹಿಳೆ ಸ್ಟೌನಲ್ಲಿ ಚಪಾತಿಯನ್ನ ಮಾಡುತ್ತಿದ್ದಾರೆ. ಈ ಫೋಟೋದಲ್ಲಿ ಆಕೆ ಕೆಲಸ ಮಾಡುತ್ತಿದ್ದರೂ ಆಕೆಯ ಸುತ್ತ ಸಹಾಯಕ್ಕೆ ಯಾರೂ ಇಲ್ಲದೇ ಇರೋದನ್ನ ನೀವು ಕಾಣಬಹುದಾಗಿದೆ. ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಇಂತಹ ಕಷ್ಟದ ಸಂದರ್ಭದಲ್ಲೂ ಮಹಿಳೆಗೆ ಕೆಲಸ ಮಾಡಲು ಹೇಳಿರೋದು ನಿಜಕ್ಕೂ ಕ್ರೂರ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ. Wtf is this shit?Let the woman rest jeez. pic.twitter.com/hnj2qRQyvp — Navin Noronha (@HouseOfNoronha) May 21, 2021 If they can use the internet to post this shit, then they can also use the internet to learn how to cook. If their hands are functional enough to click this picture, caption it and post it, they can help too. Im sick of people glorifying women's misery as "unconditional love"! — unawarewolf (@yadudewhatever) May 21, 2021 It takes a special sort of jerk to not only have their wife/mother cook for them as she is gasping for air, but to share it on social media and gloat about it. This sadly sums up the atrocities women have to endure in patriarchal societies—in the name of "unconditional love." — Bae (@QueenBaesHive) May 21, 2021