ದೇಸೀ ಸಂಸ್ಕೃತಿಗಳನ್ನು ಪ್ರಶ್ನಿಸಿ, ಅವುಗಳಿಗೆ ವ್ಯತಿರಿಕ್ತವಾದ ನಡೆಗಳನ್ನು ಇಡುವ ಮೂಲಕ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಫೀಲ್‌ನಲ್ಲಿರುವುದು ಕೆಲವೊಬ್ಬರಿಗೆ ಭಾರೀ ಟ್ರೆಂಡ್ ಆಗಿಬಿಟ್ಟಿದೆ.
ತಮ್ಮ ಮದುವೆ ವೇಳೆ ಸಾಂಪ್ರದಾಯಿಕ ಲೆಹೆಂಗಾ ಧಿರಿಸನ್ನು ಧಿಕ್ಕರಿಸಿದ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ ಸಂಜನಾ ರಿಶಿ, ಈ ಸಂದರ್ಭದಲ್ಲಿ ವಿಂಟೇಜ್ ಪ್ಯಾಂಟ್ ಸೂಟ್ ಒಂದನ್ನು ಧರಿಸಿದ್ದಾರೆ. ದೆಹಲಿ ಮೂಲದ ಉದ್ಯಮಿ ಧ್ರುವ್ ಮಹಾಜನ್, ಅವರನ್ನು ಸಂಜನಾ ವರಿಸಿದ್ದಾರೆ.
ಕಳೆದ ವರ್ಷ ದೆಹಲಿಗೆ ಮರಳಿದ್ದ ರಿಶಿ, ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಮದುವೆಯಾಗಿ, ಬಳಿಕ ಭಾರತದಲ್ಲಿ ಒಮ್ಮೆ ಸಾಂಪ್ರದಾಯಿಕವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೋವಿಡ್-19 ಸಾಂಕ್ರಮಿಕ ಇವರ ಪ್ಲಾನ್‌ಗಳಿಗೆ ಅಡ್ಡಿಯಾಗಿದೆ. ಇಟಾಲಿಯನ್ ಡಿಸೈನರ್ ಗಿಯಾನ್ ಫ್ರಾಂಕೋ ಫೇರ‍್ರೆ ವಿನ್ಯಾಸಗೊಳಿಸಿದ, 1990ರ ದಶಕದ ವಿಂಟೇಜ್ ಸೂಟ್‌ನಲ್ಲಿ ರಿಶಿ ಮಿಂಚುತ್ತಿರುವ ಚಿತ್ರಗಳು ವೈರಲ್ ಆಗಿವೆ.