ಅತಿಯಾದ ಶೀತ ವಾತಾವರಣದಿಂದಾಗಿ ದೆಹಲಿಯಲ್ಲಿ ತಾಪಮಾನ 6.8 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಪಶ್ಚಿಮ ಹಿಮಾಲಯದ ಭಾಗದಿಂದ ಒಳ ಗಾಳಿ ಬೀಸುತ್ತಿದೆ ಎಂದು ದೆಹಲಿಯ ಹವಾಮಾನ ಇಲಾಖೆ ಹೇಳಿದೆ.
ಪಾಶ್ಚಿಮಾತ್ಯದಲ್ಲಿ ಹವಾಮಾನ ಏರುಪೇರಿನಿಂದಾಗಿ ನಗರದಲ್ಲಿ ಗುರುವಾರ 2.1 ಮಿ.ಮೀ ಮಳೆಯಾಗಿದೆ. ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವ್ಯಾಪಕ ಹಿಮಪಾತಕ್ಕೆ ಕಾರಣವಾಗಿದೆ.
ಪರ್ವತಗಳಿಂದ ಶುಷ್ಕ ಗಾಳಿ ಬಯಲು ಪ್ರದೇಶದ ಕಡೆಗೆ ವ್ಯಾಪಕವಾಗಿ ಬೀಸುತ್ತಿದೆ. ಇದರಿಂದಾಗಿ ತಾಪಮಾನ ಕ್ರಮೇಣವಾಗಿ ಕುಸಿಯುತ್ತಿದೆ ಎಂದು ದೆಹಲಿ ಹವಾಮಾನ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ರು.
ಖುಷಿ ಸುದ್ದಿ….! ವಾಹನ ಸ್ಕ್ರ್ಯಾಪ್ ಮಾಡಿದ್ರೆ ಸಿಗುತ್ತೆ ಡಬಲ್ ಸಬ್ಸಿಡಿ
ದೆಹಲಿ ನಗರಕ್ಕೆ ಪ್ರಾತಿನಿಧಿಕ ದತ್ತಾಂಶ ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯವು ಕನಿಷ್ಟ 6.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ.