alex Certify ಶ್ವಾನದ ಜೊತೆ ವಿಡಿಯೋ ಮಾಡಲು ಹೋಗಿ ಜೈಲುಪಾಲಾದ ಯುಟ್ಯೂಬರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಜೊತೆ ವಿಡಿಯೋ ಮಾಡಲು ಹೋಗಿ ಜೈಲುಪಾಲಾದ ಯುಟ್ಯೂಬರ್​​

ಹೈಡ್ರೋಜನ್​ ಬಲೂನ್​​ನಿಂದ ನಾಯಿಯನ್ನ ಗಾಳಿಯಲ್ಲಿ ತೇಲುವಂತೆ ಮಾಡಿದ್ದಕ್ಕಾಗಿ ದೆಹಲಿ ಮೂಲದ ಯುಟ್ಯೂಬರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್​ಜೋನ್​ ಎಂಬ ಯುಟ್ಯೂಬ್​ ಚಾನೆಲ್​ನಲ್ಲಿ ಈ ವಿಡಿಯೋವನ್ನ ಪೋಸ್ಟ್​ ಮಾಡಲಾಗಿತ್ತು.

ಈ ವಿಡಿಯೋವನ್ನ ಇದೀಗ ಚಾನೆಲ್​ನಿಂದ ಡಿಲೀಟ್​ ಮಾಡಲಾಗಿದೆ. ಶ್ವಾನದ ದೇಹಕ್ಕೆ ಹೈಡ್ರೋಜನ್​ ಬಲೂನ್​ನ್ನು ಕಟ್ಟಲಾಗಿತ್ತು. ಇದಾದ ಬಳಿಕ ಶ್ವಾನವು ತೇಲಲು ಆರಂಭಿಸಿದೆ. ವಿಡಿಯೋದಲ್ಲಿ ಇನ್ನೊಬ್ಬ ಮಹಿಳೆ ಕೂಡ ಇದ್ದಳು. ಶ್ವಾನವು ಎರಡನೇ ಮಹಡಿಯಲ್ಲಿ ತೇಲುತ್ತಿತ್ತು.

ನಾಲ್ಕು ಮಿಲಿಯನ್​ಗೂ ಅಧಿಕ ಚಂದಾದಾರರನ್ನ ಹೊಂದಿದ್ದ ಗೌರವ್​ ಹಾಗೂ ಆತನ ತಾಯಿ ವಿರುದ್ಧ ಇದೀಗ ದೆಹಲಿಯ ಮಾಲ್ವಿಯಾ ನಗರ ಪೊಲೀಸ್​ ಸ್ಟೇಷನ್​ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂರು ದಿನಗಳ ಹಿಂದಷ್ಟೇ ಗೌರವ್​ ಈ ವಿಡಿಯೋ ಡಿಲೀಟ್​ ಮಾಡಿದ್ದು ವಿಡಿಯೋ ಚಿತ್ರೀಕರಣ ಮಾಡುವ ವೇಳೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದರು. ಅಲ್ಲದೇ ವಿಡಿಯೋದಲ್ಲಿ ಕ್ಷಮೆಯಾಚಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...