ಹೈಡ್ರೋಜನ್ ಬಲೂನ್ನಿಂದ ನಾಯಿಯನ್ನ ಗಾಳಿಯಲ್ಲಿ ತೇಲುವಂತೆ ಮಾಡಿದ್ದಕ್ಕಾಗಿ ದೆಹಲಿ ಮೂಲದ ಯುಟ್ಯೂಬರ್ನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ಜೋನ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿತ್ತು.
ಈ ವಿಡಿಯೋವನ್ನ ಇದೀಗ ಚಾನೆಲ್ನಿಂದ ಡಿಲೀಟ್ ಮಾಡಲಾಗಿದೆ. ಶ್ವಾನದ ದೇಹಕ್ಕೆ ಹೈಡ್ರೋಜನ್ ಬಲೂನ್ನ್ನು ಕಟ್ಟಲಾಗಿತ್ತು. ಇದಾದ ಬಳಿಕ ಶ್ವಾನವು ತೇಲಲು ಆರಂಭಿಸಿದೆ. ವಿಡಿಯೋದಲ್ಲಿ ಇನ್ನೊಬ್ಬ ಮಹಿಳೆ ಕೂಡ ಇದ್ದಳು. ಶ್ವಾನವು ಎರಡನೇ ಮಹಡಿಯಲ್ಲಿ ತೇಲುತ್ತಿತ್ತು.
ನಾಲ್ಕು ಮಿಲಿಯನ್ಗೂ ಅಧಿಕ ಚಂದಾದಾರರನ್ನ ಹೊಂದಿದ್ದ ಗೌರವ್ ಹಾಗೂ ಆತನ ತಾಯಿ ವಿರುದ್ಧ ಇದೀಗ ದೆಹಲಿಯ ಮಾಲ್ವಿಯಾ ನಗರ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂರು ದಿನಗಳ ಹಿಂದಷ್ಟೇ ಗೌರವ್ ಈ ವಿಡಿಯೋ ಡಿಲೀಟ್ ಮಾಡಿದ್ದು ವಿಡಿಯೋ ಚಿತ್ರೀಕರಣ ಮಾಡುವ ವೇಳೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದರು. ಅಲ್ಲದೇ ವಿಡಿಯೋದಲ್ಲಿ ಕ್ಷಮೆಯಾಚಿಸಿದ್ದರು.