ಸಾಕಷ್ಟು ಸುರಕ್ಷಾ ಕ್ರಮಗಳ ಬಳಿಕವೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾದಂತೆ ಕಾಣುತ್ತಿಲ್ಲ. ಶುಕ್ರವಾರ ಕೂಡ ವಾಯು ಗುಣಮಟ್ಟ ಕಳಪೆಯಾಗೇ ಇದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .
ವಾಯು ಗುಣಮಟ್ಟದ ಇಂಡೆಕ್ಸ್ನಲ್ಲಿ ಸಿರಿಫೋರ್ಟ್ 287 (ಕಳಪೆ), ಶ್ರೀ ಅರಬಿಂದೋ ಮಾರ್ಗ್ 291(ಕಳಪೆ) ಹಾಗೂ ಆರ್ಕೆ ಪುರಂ 302 (ಅತ್ಯಂತ ಕಳಪೆ) ಗುಣಮಟ್ಟ ದಾಖಲಿಸಿದೆ ಅಂತಾ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಗುರುವಾರ ಅತ್ಯಂತ ಕಳಪೆ ಗುಣಮಟ್ಟ ಹೊಂದಿದ್ದ ಘಾಜಿಯಾಬಾದ್ ಹಾಗೂ ಗ್ರೇಟರ್ ನೋಯ್ಡಾಗಳು ಶುಕ್ರವಾರ ಕೊಂಚ ಸುಧಾರಿಸಿಕೊಂಡು ಕಳಪೆ ಗುಣಮಟ್ಟಕ್ಕೆ ಬಂದು ನಿಂತಿವೆ.
ವಾಯು ಗುಣಮಟ್ಟ 0-50 ಇದ್ದರೆ ಅದನ್ನ ಉತ್ತಮ, 51-100 ಇದ್ದರೆ ಸಾಮಾನ್ಯ, 101 -200 ಇದ್ದರೆ ಮಧ್ಯಮ, 201 -300 ಇದ್ದರೆ ಕಳಪೆ ಹಾಗೂ 301-400 ಇದ್ದರೆ ಅತ್ಯಂತ ಕಳಪೆ ಮತ್ತು 401-500ನ್ನು ವಿಕೋಪ ಎಂದು ಪರಿಗಣಿಸಲಾಗುತ್ತೆ.