alex Certify ಗೆಳತಿಯೊಂದಿಗಿರುವಾಗಲೇ ಹತ್ಯೆಗೀಡಾದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯೊಂದಿಗಿರುವಾಗಲೇ ಹತ್ಯೆಗೀಡಾದ ಯುವಕ

ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ 18 ವರ್ಷದ ವಿದ್ಯಾರ್ಥಿಯೊಬ್ಬ ಥಳಿತಕ್ಕೊಳಗಾಗಿ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.

ಪಶ್ಚಿಮ ದೆಹಲಿಯ ಆದರ್ಶ ನಗರದ 18ವರ್ಷದ ರಾಹುಲ್ ಮೃತನಾದವನು ಎಂದು ಗುರುತಿಸಲಾಗಿದೆ. ಈತ ಹತ್ಯೆಗೀಡಾಗುವ ಮುನ್ನ ಬಾಲಕಿಯೊಂದಿಗೆ ಇರುವುದು ಸಹ ವಿಡಿಯೋ ಫುಟೇಜ್‌ನಲ್ಲಿ ಕಂಡುಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ, ಇವರಲ್ಲಿ‌ ಮೂವರು ಅಪ್ರಾಪ್ತರು.

ಜಹಂಗೀರ್ ಪುರಿಯಾ ನಿವಾಸಿಯಾಗಿದ್ದ ಇವರಿಬ್ಬರೂ ಸ್ನೇಹಿತರಾಗಿದ್ದರು. ಇಬ್ಬರ ಜಾತಿ ಬೇರೆಯಾದ ಕಾರಣ ಆಕೆಯ ಕುಟುಂಬವೂ ಇವರ ಸ್ನೇಹಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಆಕೆಯ ಸಹೋದರ ಮತ್ತು ಇತರ ಕುಟುಂಬ ಸದಸ್ಯರು ಆತನನ್ನು ಥಳಿಸಿದ್ದು, ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಳ್ಳಿಯಿಂದ ಬಂದು ನೆಲೆಸಿದ್ದ ರಾಹುಲ್ ಎರಡನೇ ವರ್ಷದ ಬಿಎ ಓದುತ್ತಿದ್ದ, ಟ್ಯೂಷನ್ ಕೂಡ ಮಾಡುತ್ತಿದ್ದನು. ಘಟನೆ ನಡೆದ ದಿನ ಆಕೆಯೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದಾಗ, ಏಕಾಏಕಿ ಆತನ‌ ಮೇಲೆ ದಾಳಿ ನಡೆದಿದೆ. ಸ್ಥಳೀಯರು ತಡೆಯಲು ಪ್ರಯತ್ನಿಸಿದ್ದಾರೆ. ಹಲ್ಲೆ ಪ್ರಮಾಣ ತೀವ್ರವಾಗಿದ್ದರಿಂದ ಜೀವಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...