ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿರುವ ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಗಳು ಕೊರೊನಾ ಲಸಿಕೆ ಸಿಗುವವರೆಗೂ ಪುನಾರಂಭವಾಗೋದು ಅನುಮಾನ ಎಂದು ದೆಹಲಿ ಡಿಸಿಎಂ ಮನಿಷ್ ಸಿಸೋಡಿಯಾ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕು ಉಲ್ಪಣಿಸಿದ ಹಿನ್ನೆಲೆ ದೇಶಾದ್ಯಂತ ಮಾರ್ಚ್ ಅಂತ್ಯದಿಂದ ಶಾಲಾ – ಕಾಲೇಜುಗಳನ್ನ ಬಂದ್ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿತ್ತು.
ಮುಂದಿನ ಆದೇಶ ಬರುವವರೆಗೂ ಶಾಲೆಗಳನ್ನ ತೆರೆಯಲಾಗೋದಿಲ್ಲ ಅಂತಾ ಸಿಸೋಡಿಯಾ ಅಕ್ಟೋಬರ್ 30ರಂದು ಹೇಳಿದ್ದರು. ಇದೀಗ ಕೊರೊನಾ ಲಸಿಕೆ ಸಿಗುವವರೆಗೂ ಶಾಲೆಗಳು ಪುನಾರಂಭವಾಗೋದು ಅನುಮಾನ ಎಂದು ಹೇಳಿದ್ದಾರೆ.
ರಾಜ್ಯದ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸೋದ್ರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮುಂದಿನ ಆದೇಶದವರೆಗೂ ಶಾಲೆಗಳು ಬಂದ್ ಇರಲಿವೆ ಅಂತಾ ಹೇಳಿದ್ದಾರೆ.