alex Certify ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ ಬರ್ಗ್​ ವಿರುದ್ಧ ಎಫ್​ಐಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ ಬರ್ಗ್​ ವಿರುದ್ಧ ಎಫ್​ಐಆರ್

ದೆಹಲಿ ಪೊಲೀಸರು ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ಬರ್ಗ್​ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರೈತ ಪ್ರತಿಭಟನೆ ವಿಚಾರವಾಗಿ ಪ್ರಚೋದನಾತ್ಮಕ ಟ್ವೀಟ್​ಗಳನ್ನ ಹರಿಬಿಟ್ಟ ಹಿನ್ನೆಲೆ ಗ್ರೇಟಾ​ ವಿರುದ್ಧ ಕೇಸ್​ ದಾಖಲಾಗಿದೆ.

ಪಾಪ್​ ಗಾಯಕಿ ರಿಹನ್ನಾ ಟ್ವೀಟ್​ ಬೆನ್ನಲ್ಲೇ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ಬರ್ಗ್​ ಸೇರಿದಂತೆ ವಿದೇಶಿ ಸೆಲೆಬ್ರಿಟಿಗಳು ರೈತ ಪ್ರತಿಭಟನೆ ಬೆಂಬಲಿಸಿ ಟ್ವೀಟ್​ ಮಾಡಿದ್ದರು. ಫೆಬ್ರವರಿ 2ರಂದು ಟ್ವೀಟ್​ ಮಾಡಿದ್ದ ಗ್ರೇಟಾ ರೈತರ ಪ್ರತಿಭಟನೆಯೊಂದಿಗೆ ನಾವಿದ್ದೇವೆ ಎಂದು ಹೇಳಿಕೊಂಡಿದ್ದಳು. ಮಾತ್ರವಲ್ಲದೇ ಡಾಕ್ಯೂಮೆಂಟ್​ ಒಂದನ್ನ ಶೇರ್​ ಮಾಡಿ ಕೆಲವೇ ನಿಮಿಷಗಳಲ್ಲಿ ಅದನ್ನ ಡಿಲೀಟ್​ ಮಾಡಿದ್ದರು. ಈ ಡಿಲೀಟ್ ಆದ ಟ್ವೀಟ್​ ಸಾಕಷ್ಟು ವಿವಾದವನ್ನ ಹುಟ್ಟು ಹಾಕಿತ್ತು.

ವಿದೇಶಿ ಸೆಲೆಬ್ರಿಟಿಗಳು ಹಾಗೂ ಕಾರ್ಯಕರ್ತರು ದೇಶದ ವಿಚಾರದಲ್ಲಿ ಮೂಗು ತೂರಿಸಿರೋದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಬುಧವಾರ ಈ ಸಂಬಂಧ ಟ್ವೀಟ್​ ಮಾಡಿದ್ದ ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್​ – ಭಾರತವನ್ನ ಗುರಿಯಾಗಿಸಿ ಮಾಡಲಾಗುತ್ತಿರುವ ಈ ಪೂರ್ವನಿಯೋಜಿತ ಅಭಿಯಾನ ಎಂದಿಗೂ ಸಫಲವಾಗೋದಿಲ್ಲ ಎಂದು ಬರೆದುಕೊಂಡಿದ್ದರು. ಈ ಟ್ವೀಟ್​ ಜೊತೆಯಲ್ಲಿ ಇಂಡಿಯಾ ಟುಗೆದರ್​​ ಎಂಬ ಹ್ಯಾಶ್​ಟ್ಯಾಗ್​ನ್ನು ಹಾಕಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...