ಕೃಷಿ ಕ್ಷೇತ್ರದ ಸುಧಾರಣೆಗೆಂದು ಕೇಂದ್ರ ಸರ್ಕಾರ ತಂದಿರುವ ನೂತನ ಕಾಯಿದೆಗಳನ್ನು ವಿರೋಧಿಸುತ್ತಾ ’ದಿಲ್ಲಿ ಚಲೋ’ ಮೂಡ್‌ನಲ್ಲಿರುವ ಪ್ರತಿಭಟನಾಕಾರರಿಗೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿ ಏಟುಗಳು ಬಿದ್ದಿವೆ.
ಇದೇ ವೇಳೆ, ಪ್ರತಿಭಟನೆ ನಿರತ ಮಂದಿಗೆ ಹೆದ್ದಾರಿಯಲ್ಲಿರುವ ಡಾಬಾ ಒಂದು ನೆರವಿಗೆ ಬಂದು ಊಟದ ವ್ಯವಸ್ಥೆ ಮಾಡಿದೆ.
ಹರಿಯಾಣಾದ ಮುರ್ತಾಲ್‌ನಲ್ಲಿರುವ ಅಮ್ರಿಕ್ ಸುಖ್‌ದೇವ್ ಡಾಬಾ ಪ್ರತಿಭಟನಾನಿರತ ರೈತರಿಗೆ ತನ್ನ ಬಾಗಿಲುಗಳನ್ನು ತೆರೆದಿದ್ದು, ಮೂರು ದಿನಗಳ ಮಟ್ಟಿಗೆ ಲಂಗರ್ ಸೇವೆ ಆರಂಭಿಸಿದೆ. ಡಾಬಾ ಸಿಬ್ಬಂದಿಯ ಈ ಹೃದಯಸ್ಪರ್ಶಿ ನಡೆಯು ಅನೇಕ ನೆಟ್ಟಿಗರ ಮನಗೆದ್ದಿದೆ.
ಡಾಬಾದಲ್ಲಿ ರೈತರು ಆಹಾರ ಸೇವಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.