alex Certify ಮದ್ಯಪಾನದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ: ಜಾಲತಾಣಗಳಲ್ಲಿ ತಮಾಷೆಯ ಮೆಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಪಾನದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ: ಜಾಲತಾಣಗಳಲ್ಲಿ ತಮಾಷೆಯ ಮೆಮೆ

Delhi Govt Just Lowered Drinking Age to 21 from 25 and Twitter is Abuzz With Jokes

ಅಧಿಕೃತವಾಗಿ ಮದ್ಯಪಾನ ಮಾಡಲು ಇದ್ದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ, ಈ ವಿಚಾರದಲ್ಲಿ ಪಕ್ಕದ ನೋಯಿಡಾ ಹಾಗೂ ಗುರುಗ್ರಾಮ ಆಡಳಿತಗಳು ಇಟ್ಟ ಹೆಜ್ಜೆಯನ್ನೇ ಇಟ್ಟಿದೆ.

ಈ ಕುರಿತು ಘೋಷಣೆ ಮಾಡಿದ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ, “ಸಚಿವರ ಸಲಹೆಗಳನ್ನು ಪಡೆದು ಹೊಸ ಅಬಕಾರಿ ನೀತಿಗೆ ಸಂಪುಟವು ಅನುಮೋದನೆ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಯನ್ನು ತೆರೆಯುವುದಿಲ್ಲ ಹಾಗೂ ಸರ್ಕಾರ ಯಾವುದೇ ಮದ್ಯದಂಗಡಿ ನಡೆಸುವುದಿಲ್ಲ ಎಂದೂ ಸಹ ನಿರ್ಧರಿಸಲಾಗಿದೆ.

ಟೀಂ ಇಂಡಿಯಾ ಆಟಗಾರರ ವಿಮಾನ ಪ್ರಯಾಣದ ವಿಡಿಯೋ ಹಂಚಿಕೊಂಡ ಬಿಸಿಸಿಐ

ಪ್ರಸಕ್ತ, ದೆಹಲಿಯಲ್ಲಿರುವ 60%ರಷ್ಟು ಮದ್ಯದಂಗಡಿಗಳನ್ನು ಸರ್ಕಾರವೇ ನಡೆಸುತ್ತಿದೆ ಎಂದ ಸಿಸೋಡಿಯಾ, “ಮದ್ಯದ ಮಾಫಿಯಾ ನಿಯಂತ್ರಣಕ್ಕೆ ತರಲು ಮದ್ಯದಂಗಡಿಗಳಿಗೆ ಮದ್ಯವನ್ನು ಸಮರ್ಪಕವಾಗಿ ಹಂಚುವುದನ್ನು ಸರ್ಕಾರ ಖಾತ್ರಿ ಪಡಿಸಲಿದೆ. ಅಬಕಾರಿ ಇಲಾಖೆಗೆ ಮಾಡಲಾದ ಈ ಸುಧಾರಣೆಗಳ ಬಳಿಕ ಸರ್ಕಾರದ ಆದಾಯದಲ್ಲಿ 20%ನಷ್ಟು ಏರಿಕೆಯಾಗುವ ಅಂದಾಜು ಹೊಂದಲಾಗಿದೆ,” ಎಂದು ತಿಳಿಸಿದ್ದಾರೆ.

ಸರ್ಕಾರದ ಈ ನಡೆಯ ಬಗ್ಗೆ ನೆಟ್ಟಿಗರ ಸಮುದಾಯದಲ್ಲಿ ಕಲರ್‌ಫುಲ್‌ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮದ್ಯಪ್ರಿಯ ಯುವ ಸಮುದಾಯಕ್ಕೆ ಈ ಸುಧಾರಣೆ ಖುಷಿ ತಂದಿದ್ದರೆ, ಮಿಕ್ಕ ರಾಜ್ಯಗಳ ಯುವಕರು ’ನಮ್ಮಲ್ಲಿ ಯಾಕೆ ಹೀಗೆಲ್ಲಾ ಮಾಡೋದಿಲ್ಲ’ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...