
ಗೆಳೆಯ ರೋಹಿತ್ ಖತ್ತರ್ ಎಂಬವರು ಶೇರ್ ಮಾಡಿದ ಹಫೀಜ್ ಹಾಗೂ ಹಬಿಬುರ್ ಹಾಡಿರುವ ಹಾಡುಗಳನ್ನ ಆನಂದ್ ಮಹೀಂದ್ರಾ ಶೇರ್ ಮಾಡಿದ್ದಾರೆ.
ಹಫೀಜ್ ಹಾಗೂ ಹಬಿಬುರ್ ಇಬ್ಬರೂ ಕಸ ಆಯುವ ಕೆಲಸವನ್ನ ಮಾಡುತ್ತಾರೆ. ಆದರೆ ಇವರಿಬ್ಬರ ಧ್ವನಿಯಲ್ಲಿರುವ ಜಾದೂ ನೆಟ್ಟಿಗರನ್ನ ಮಂತ್ರಮುಗ್ಧರನ್ನಾಗಿಸಿದೆ. ಹೀಗಾಗಿ ಹಫೀಜ್ ಹಾಗೂ ಹಬಿಬುರ್ಗೆ ಸಂಗೀತ ಕಲಿಯಲು ಸಹಾಯ ಮಾಡಲು ಇಚ್ಛಿಸಿದ್ದಾರೆ. ಅವರು ಬೆಳಗ್ಗೆ ಕೆಲಸವನ್ನ ಮಾಡಿ ಸಂಜೆ ಸಂಗೀತ ಕೆಲಸ ಕಲಿಯಲು ಸಾಧ್ಯವಾಗುವಂತೆ ಮಾಡಲು ಅನುಕೂಲ ಮಾಡಿಕೊಡುವ ಯಾರಾದರೂ ಸಂಗೀತ ಗುರುಗಳಿದ್ದರೆ ಮಾಹಿತಿ ನೀಡುವಂತೆ ಕೇಳಿದ್ದಾರೆ.
ಹಫೀಜ್ ಹಾಗೂ ಹಬಿಬುರ್ 1969ರಲ್ಲಿ ತೆರೆ ಕಂಡ ಅನಮೋಲ್ ಮೋತಿ ಸಿನಿಮಾದ ಏ ಜಾನ್ ಚಮನ್ ಹಾಗೂ 2010ರಲ್ಲಿ ತೆರೆಕಂಡ ಶಾರೂಖ್ ಖಾನ್ ಅಭಿನಯದ ಸಿನಿಮಾ ʼಮೈ ನೇಮ್ ಈಸ್ ಖಾನ್ʼನಿಂದ ಸಜ್ದಾ ಹಾಡನ್ನ ಹಾಡಿದ್ದಾರೆ.