
ದೆಹಲಿ ಹಾಗೂ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವೆ ನಿರ್ಮಿಸಲಾಗುವ ಎಕ್ಸ್ಪ್ರೆಸ್ ವೇನಿಂದ ಉಭಯ ನಗರಗಳ ನಡುವಿನ ಅಂತರವು 50 ಕಿಮೀಗಳಷ್ಟು ತಗ್ಗಲಿದೆ.
ಈ ಹೆದ್ದಾರಿಯು ದೆಹಲಿ-ಡೆಹ್ರಾಡೂನ್ ನಡುವಿನ ಲೋನಿ, ಭಾಗ್ಪತ್, ಶಾಮ್ಲಿ, ಸಹರಾನ್ಪುರ ಹಾಗೂ ಗಣೇಶ್ಪುರಗಳನ್ನು ಸಂಪರ್ಕಿಸಲಿದೆ. ರಸ್ತೆ ನಿರ್ಮಾಣದ ಮೊದಲ ಹಂತದ ಟೆಂಡರ್ ಅನ್ನು ಸರ್ಕಾರ ಅದಾಗಲೇ ಬಿಡುಗಡೆ ಮಾಡಿದ್ದು, ಇದಕ್ಕಾಗಿ ಸರ್ಕಾರಕ್ಕೆ 2400 ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ.
ಡೂನ್ ಎಕ್ಸ್ಪ್ರೆಸ್ ವೇ ಎಂದು ಕರೆಯಲಾಗುವ ಈ ಹೆದ್ದಾರಿ ನಿರ್ಮಾಣ ಕಾರ್ಯವು ಎರಡು ವರ್ಷಗಳಲ್ಲಿ ಮುಗಿಯಲಿದೆ. ಟೆಂಡರ್ ಪ್ರಕ್ರಿಯೆಗೆಂದು ಸರ್ಕಾರವು ಮೊದಲ ಹಂತದಲ್ಲಿ ಎರಡು ಕಂಪನಿಗಳಿಗೆ ಆಯ್ಕೆ ಮಾಡಿದೆ.