alex Certify ಪೊಲೀಸ್​ ಪೇದೆಯನ್ನೇ ಅಪಹರಿಸಿ ದರೋಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಪೇದೆಯನ್ನೇ ಅಪಹರಿಸಿ ದರೋಡೆ

ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ಪೊಲೀಸ್​ ಪೇದೆಯನ್ನ ಬಸ್​ನಲ್ಲಿ ಅಪಹರಿಸಿದ ದುಷ್ಕರ್ಮಿಗಳು ಉತ್ತರ ಪ್ರದೇಶದ ಫಿರೋಜಾಬಾದ್​ಗೆ ಕರೆದೊಯ್ದು ದರೋಡೆ ಮಾಡಿ ಹಲ್ಲೆ ನಡೆಸಿದ್ದಾರೆ.

ಅಕ್ಟೋಬರ್​ 21ರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾನ್ಸ್​ಟೇಬಲ್​ ಸಚಿನ್​ ಕರ್ತವ್ಯದಲ್ಲಿದ್ದ ಸಮಯದಲ್ಲಿ ಕಾಶ್ಮೀರಿ ಗೇಟ್​ ಪ್ರದೇಶದ ಬಳಿ ಬಂದ ಗೂಂಡಾಗಳು ಬಸ್​ನಲ್ಲಿ ಪೇದೆಯನ್ನ ತುಂಬಿಕೊಂಡು ದರೋಡೆ ಮಾಡಿದ್ದಾರೆ. ಬಸ್​ನ ಬಾಗಿಲನ್ನ ಹಾಕಿದ ಕಳ್ಳರು ಸಚಿನ್​​ರಿಂದ ಪಿಸ್ತೂಲ್​, ಪರ್ಸ್ ಹಾಗೂ ಮೊಬೈಲ್​ ಫೋನ್​ನ್ನ ಕಸಿದುಕೊಂಡಿದ್ದಾರೆ.

250 ಕಿಲೋಮೀಟರ್​ ದೂರದವರೆಗೆ ಬಸ್​ನಲ್ಲಿ ಸಚಿನ್​ರನ್ನ ಕೊಂಡೊಯ್ದ ಕಳ್ಳರು ದರೋಡೆ ನಡೆಸಿ ಫಿರೋಜಾಬಾದ್​ನಲ್ಲಿ ಬಿಸಾಡಿದ್ದಾರೆ. ಪೇದೆ ಸಚಿನ್​ ಹತ್ತಿರದ ಪೊಲೀಸ್​ ಠಾಣೆಗೆ ಹೇಗೋ ತಲುಪಿದ್ದು ಕಳ್ಳತನದ ಬಗ್ಗೆ ವಿವರಣೆ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...