alex Certify ಬದುಕಿದ್ದವನನ್ನು ʼಮೃತʼನೆಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ…! ಅಂತ್ಯಸಂಸ್ಕಾರದ ವೇಳೆ ಬಹಿರಂಗವಾಯ್ತು ಎಡವಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದುಕಿದ್ದವನನ್ನು ʼಮೃತʼನೆಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ…! ಅಂತ್ಯಸಂಸ್ಕಾರದ ವೇಳೆ ಬಹಿರಂಗವಾಯ್ತು ಎಡವಟ್ಟು

ಮೆದುಳಿನ ರಕ್ತಸ್ರಾವದಿಂದ ಪಾಟ್ನಾದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಅಲ್ಲದೇ ಕುಟುಂಬಸ್ಥರಿಗೆ ಮರಣ ಪ್ರಮಾಣ ಪತ್ರವನ್ನೂ ನೀಡಿದ್ದರು.

ಏಪ್ರಿಲ್​ 3ರಂದು ಆಸ್ಪತ್ರೆಗೆ ದಾಖಲಾಗಿದ್ದ 40 ವರ್ಷದ ಚುನ್ನು ಕುಮಾರ್​​ ಕೋವಿಡ್​​​ನಿಂದ ಸಾವಿಗೀಡಾಗಿದ್ದಾನೆ ಎಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬಸ್ಥರಿಗೆ ಮರಣ ಪತ್ರವನ್ನ ನೀಡಿತ್ತು.

ಆದರೆ ಅಂತ್ಯಕ್ರಿಯೆ ಸಮಾರಂಭಕ್ಕೂ ಮುನ್ನ ಶವಾಗಾರದಲ್ಲಿ ಕುಮಾರ್​ ಮೃತದೇಹದ ಮುಖವನ್ನ ನೋಡುತ್ತೇವೆ ಎಂದು ಕುಟುಂಬಸ್ಥರು ಒತ್ತಡ ಹೇರಿದ್ದಾರೆ. ಮೃತ ದೇಹದ ಮುಖ ನೋಡಿದ ವೇಳೆ ಅದು ಬೇರೊಬ್ಬರ ಮೃತದೇಹ ಎಂಬ ವಿಚಾರ ತಿಳಿದು ಬಂದಿದೆ.

ಸೂಕ್ತ ವಿಚಾರಣೆ ನಡೆಸಿದ ಬಳಿಕ ಕುಮಾರ್​ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಕುಮಾರ್​ ಕುಟುಂಬಸ್ಥರಿಗೆ ಆಸ್ಪತ್ರೆ ಸಿಬ್ಬಂದಿ ಬೇರೊಬ್ಬರ ಮೃತದೇಹವನ್ನ ನೀಡಿದ್ದರು.

ಈ ಅಚಾತುರ್ಯಕ್ಕೆ ಕಾರಣರಾದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಸೂಪರಿಟೆಂಡೆಂಟ್​​ ಡಾ. ಐ.ಎಸ್.​ ಠಾಕೂರ್​ ಹೇಳಿದ್ದಾರೆ .

ನನ್ನ ಕುಟುಂಬಸ್ಥರು ಕೊರೊನಾ ನೆಗೆಟಿವ್​ ವರದಿ ಹೊಂದಿದ್ದಾರೆ. ನನ್ನ ಪತಿಯ ಕಾಲು ಮುರಿದಿದ್ದರಿಂದ ಅವರು ಕಳೆದ ಅನೇಕ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಒಂದಿಂಚೂ ನಡೆದಾಡಲು ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಕೊರೊನಾ ಸೋಂಕು ಹೇಗೆ ಬರೋಕೆ ಸಾಧ್ಯ..? ಇದು ಸಂಪೂರ್ಣ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ಪರಿಣಾಮವಾಗಿದೆ. ಇಲ್ಲವಾದಲ್ಲಿ ಇಂತಹ ಅಚಾತುರ್ಯ ನಡೆಯಲು ಸಾಧ್ಯವೇ ಇಲ್ಲ ಎಂದು ಕುಮಾರ್​ ಪತ್ನಿ ಕವಿತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...