alex Certify ದಿಶಾ ರವಿಗೆ ಗ್ರೇಟಾ ಥನ್​ ಬರ್ಗ್​ ಬೆಂಬಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಶಾ ರವಿಗೆ ಗ್ರೇಟಾ ಥನ್​ ಬರ್ಗ್​ ಬೆಂಬಲ

ಸ್ವೀಡಿಷ್​ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ ಬರ್ಗ್​ ಬೆಂಗಳೂರಿನ ಪರಿಸರ ಕಾರ್ಯಕರ್ತೆ 22 ವರ್ಷದ ದಿಶಾ ರವಿಗೆ ಬೆಂಬಲ ನೀಡೋ ಕಾರ್ಯವನ್ನ ಮುಂದುವರಿಸಿದ್ದಾರೆ. ಪ್ರಸ್ತುತ ದಿಶಾ ರವಿ ರೈತ ಪ್ರತಿಭಟನೆಯಲ್ಲಿ ಟೂಲ್​ ಕಿಟ್​ ನಿರ್ಮಾಣ ಆರೋಪದಡಿಯಲ್ಲಿ ಜೈಲು ಪಾಲಾಗಿದ್ದಾರೆ.

2018ರಲ್ಲಿ ಗ್ರೇಟಾ ಥನ್​ಬರ್ಗ್​ ನಿರ್ಮಾಣ ಮಾಡಿದ ಫ್ರೈಡೇಸ್​ ಫಾರ್​ ಫ್ಯೂಚರ್​ ಎಂಬ ಸಂಘದ ಅಧಿಕೃತ ಟ್ವಿಟರ್​ ಖಾತೆಯಲ್ಲಿ, ಎಲ್ಲರಿಗೂ ನ್ಯಾಯ ನೀಡಲಿಕ್ಕಾಗಿ ನಮ್ಮ ಧ್ವನಿಯನ್ನ ಶಾಂತಿಯುತವಾಗಿ ಹಾಗೂ ಗೌರವಯುತವಾಗಿ ಎತ್ತಬೇಕು ಎಂದು ಹೇಳಿಕೊಂಡಿದೆ.

ವಾಕ್​ ಸ್ವಾತಂತ್ರ್ಯ ಹಾಗೂ ಶಾಂತಿಯುತ ಪ್ರತಿಭಟನೆಯ ಹಕ್ಕು ಮಾನವ ಹಕ್ಕುಗಳ ಅಡಿಯಲ್ಲೇ ಬರುತ್ತದೆ. ಇದು ಪ್ರಜಾಪ್ರಭುತ್ವದ ಭಾಗ ಕೂಡ. ದಿಶಾ ರವಿಯೊಂದಿಗೆ ನಾವಿದ್ದೇವೆ ಎಂದು ಗ್ರೇಟಾ ಥನ್​ಬರ್ಗ್ ಟ್ವೀಟಾಯಿಸಿದ್ದಾರೆ.

ದೇಶದಲ್ಲಿ ರೈತ ಪ್ರತಿಭಟನೆ ಹೇಗೆ ನಡೆಯಬೇಕು ಎಂಬ ಯೋಜನೆಯನ್ನೊಳಗೊಂಡ ಟೂಲ್​ ಕಿಟ್​ ನಿರ್ಮಾಣ ಆರೋಪದಡಿಯಲ್ಲಿ ದೆಹಲಿ ಪೊಲೀಸರು ದಿಶಾ ರವಿಯನ್ನ ಬಂಧಿಸಿದ್ದಾರೆ. ಈ ರೀತಿಯ ಟೂಲ್​ ಕಿಟ್​ ನಿರ್ಮಾಣ ದೇಶ ದ್ರೋಹಕ್ಕೆ ಸಮನಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

— Greta Thunberg (@GretaThunberg) February 19, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...