![](https://kannadadunia.com/wp-content/uploads/2021/02/disha-ravi-greta-thunberg-1613758815.jpg)
2018ರಲ್ಲಿ ಗ್ರೇಟಾ ಥನ್ಬರ್ಗ್ ನಿರ್ಮಾಣ ಮಾಡಿದ ಫ್ರೈಡೇಸ್ ಫಾರ್ ಫ್ಯೂಚರ್ ಎಂಬ ಸಂಘದ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಎಲ್ಲರಿಗೂ ನ್ಯಾಯ ನೀಡಲಿಕ್ಕಾಗಿ ನಮ್ಮ ಧ್ವನಿಯನ್ನ ಶಾಂತಿಯುತವಾಗಿ ಹಾಗೂ ಗೌರವಯುತವಾಗಿ ಎತ್ತಬೇಕು ಎಂದು ಹೇಳಿಕೊಂಡಿದೆ.
ವಾಕ್ ಸ್ವಾತಂತ್ರ್ಯ ಹಾಗೂ ಶಾಂತಿಯುತ ಪ್ರತಿಭಟನೆಯ ಹಕ್ಕು ಮಾನವ ಹಕ್ಕುಗಳ ಅಡಿಯಲ್ಲೇ ಬರುತ್ತದೆ. ಇದು ಪ್ರಜಾಪ್ರಭುತ್ವದ ಭಾಗ ಕೂಡ. ದಿಶಾ ರವಿಯೊಂದಿಗೆ ನಾವಿದ್ದೇವೆ ಎಂದು ಗ್ರೇಟಾ ಥನ್ಬರ್ಗ್ ಟ್ವೀಟಾಯಿಸಿದ್ದಾರೆ.
ದೇಶದಲ್ಲಿ ರೈತ ಪ್ರತಿಭಟನೆ ಹೇಗೆ ನಡೆಯಬೇಕು ಎಂಬ ಯೋಜನೆಯನ್ನೊಳಗೊಂಡ ಟೂಲ್ ಕಿಟ್ ನಿರ್ಮಾಣ ಆರೋಪದಡಿಯಲ್ಲಿ ದೆಹಲಿ ಪೊಲೀಸರು ದಿಶಾ ರವಿಯನ್ನ ಬಂಧಿಸಿದ್ದಾರೆ. ಈ ರೀತಿಯ ಟೂಲ್ ಕಿಟ್ ನಿರ್ಮಾಣ ದೇಶ ದ್ರೋಹಕ್ಕೆ ಸಮನಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.