ಕೊರೊನಾ ಲಾಕ್ ಡೌನ್‌ನಿಂದ ಭಾರಿ ಸಮಸ್ಯೆ ಅನುಭವಿಸಿದ ವರ್ಗದಲ್ಲಿ ಮೊದಲಿಗೆ ವಲಸೆ ಕಾರ್ಮಿಕರು ನಿಲ್ಲುತ್ತಾರೆ. ಇದೀಗ ಆ ವಲಸೆ ಕಾರ್ಮಿಕರ ಸಮಸ್ಯೆ ಕುರಿತಾದ ಹಾಡು ವೈರಲ್ ಆಗಿದೆ.
ಹೌದು, ಒಡಿಶಾ ಮೂಲದ 27 ವರ್ಷದ ದುಲೇಶ್ವರಿ ತಂಡಿ ಎನ್ನುವ ವಲಸೆ ಕಾರ್ಮಿಕನೊಬ್ಬ ಕೊರೊನಾದಿಂದ ಆಗಿರುವ ಸಮಸ್ಯೆ ಬಗ್ಗೆ ರ್ಯಾಪ್ ಹಾಡನ್ನು ಹಾಡಿದ್ದರು. ಸರ್ಕಾರವೇ ಇದಕ್ಕೆ ಉತ್ತರಿಸಿ ಎಂದು ಇರುವ ಈ ಹಾಡು, ಭಾರಿ ವೈರಲ್ ಆಗಿದೆ.
2013ರಲ್ಲಿ ಬಿಎಸ್ಸಿ ಪದವಿ ಪಡೆದ ತಂಡಿ ಅವರು ರಾಯಪುರದಲ್ಲಿ ಹೋಟೆಲ್‌ನಲ್ಲಿ ತಟ್ಟೆ ತೊಳೆಯುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ ತಂಡಿ ಹಳ್ಳಿಗೆ ವಾಪಸಾಗಿದ್ದಾರೆ. ಈ ವೇಳೆ ತಾನೂ ಸೇರಿದಂತೆ ವಲಸೆ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದರು. ಇದೀಗ ಈ ಸಾಂಗ್ ವೈರಲ್ ಆಗಿದೆ.
https://www.youtube.com/watch?time_continue=1&v=f3XpZG2q4_0&feature=emb_logo