alex Certify ಈ ಸಮಸ್ಯೆಯನ್ನ ಹೊಂದಿರುವವರು ಕೋವಿಶೀಲ್ಡ್​ ಸ್ವೀಕರಿಸಲೇಬೇಡಿ ಎಂದ ಸೇರಮ್​​ ಇನ್​ಸ್ಟಿಟ್ಯೂಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಸ್ಯೆಯನ್ನ ಹೊಂದಿರುವವರು ಕೋವಿಶೀಲ್ಡ್​ ಸ್ವೀಕರಿಸಲೇಬೇಡಿ ಎಂದ ಸೇರಮ್​​ ಇನ್​ಸ್ಟಿಟ್ಯೂಟ್​

ಕೋವಿಶೀಲ್ಡ್​ನ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಭಾರತದ ಸೇರಮ್​ ಇನ್​ಸ್ಟಿಟ್ಯೂಟ್​​​, ಲಸಿಕೆಗೆ ಬಳಕೆ ಮಾಡಲಾದ ರಾಸಾಯನಿಕಗಳ ವಿರುದ್ಧ ಅಲರ್ಜಿಯ ಸಮಸ್ಯೆಯನ್ನ ಹೊಂದಿರುವ ಯಾವುದೇ ವ್ಯಕ್ತಿ ಕೋವಿಶೀಲ್ಡ್​ ಲಸಿಕೆಗಳನ್ನ ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ.

ಕೋವಿಶೀಲ್ಡ್​ ಲಸಿಕೆಗೆ ಎಲ್​ – ಹಿಸ್ಟಿಡೈನ್​, ಎಲ್​ – ಹಿಸ್ಟಿಡೈನ್​ ಹೈಡ್ರೋಕ್ಲೋರೈಡ್​​ ಮೊನೋಹೈಡ್ರೇಟ್​, ಮ್ಯಾಗ್ನೀಷಿಯಂ ಕ್ಲೋರೈಡ್​​​ ಹೆಕ್ಸಾಹೈಡ್ರೇಟ್​​, ಪೋಲಿಸೋರ್ಬೆಟ್​, ಎಥನಾಲ್​, ಸುಕ್ರೋಸ್​, ಸೋಡಿಯಂ ಕ್ಲೋರೈಡ್​, ಡೈಸೋಡಿಯಂ ಎಡಿಟೇಟ್​ ಡಿಹೈಡ್ರೇಟ್​ ಹಾಗೂ ಇಂಜೆಕ್ಷನ್​ ವಾಟರ್​ ಬಳಕೆ ಮಾಡಿದ್ದೇವೆ ಎಂದು ಸೇರಮ್​ ಮಾಹಿತಿ ನೀಡಿದೆ.

ಅಲ್ಲದೇ ಕೋವಿಶೀಲ್ಡ್ ಲಸಿಕೆಯನ್ನ ಪಡೆಯುವ ಮುನ್ನ ಆ ವ್ಯಕ್ತಿಯು ತನ್ನ ಆರೋಗ್ಯ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಒಂದು ವೇಳೆ ಯಾವುದಾದರೂ ಔಷಧಿಗಳಿಗೆ ಬಳಕೆ ಮಾಡಲಾಗುವ ಡ್ರಗ್​, ಅಥವಾ ಆಹಾರದಿಂದ ನಿಮಗೆ ಅಲರ್ಜಿ ಇದ್ದಲಿ ನೀವು ಲಸಿಕೆ ಪಡೆಯಲೇಬೇಡಿ ಎಂದು ಸೇರಮ್​ ಹೇಳಿದೆ.

ಜ್ವರದ ಲಕ್ಷಣ, ಗರ್ಭಿಣಿ, ಗರ್ಭಿಣಿಯಾಗುವ ತಯಾರಿಯಲ್ಲಿ ಇರುವವರು ಹಾಗೂ ಬಾಣಂತಿಯರು ಈ ಲಸಿಕೆಯನ್ನ ಪಡೆಯಲೇಬೇಡಿ ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ನೀವು ಈಗಾಗಲೇ ಬೇರೆ ಲಸಿಕೆಯ ಡೋಸ್​ ಪಡೆದಿದ್ದರೆ ಅದರ ಬಗ್ಗೆಯೂ ಮಾಹಿತಿ ನೀಡುವಂತೆ ಕೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...