ಕೋವಿಶೀಲ್ಡ್ನ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಭಾರತದ ಸೇರಮ್ ಇನ್ಸ್ಟಿಟ್ಯೂಟ್, ಲಸಿಕೆಗೆ ಬಳಕೆ ಮಾಡಲಾದ ರಾಸಾಯನಿಕಗಳ ವಿರುದ್ಧ ಅಲರ್ಜಿಯ ಸಮಸ್ಯೆಯನ್ನ ಹೊಂದಿರುವ ಯಾವುದೇ ವ್ಯಕ್ತಿ ಕೋವಿಶೀಲ್ಡ್ ಲಸಿಕೆಗಳನ್ನ ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ.
ಕೋವಿಶೀಲ್ಡ್ ಲಸಿಕೆಗೆ ಎಲ್ – ಹಿಸ್ಟಿಡೈನ್, ಎಲ್ – ಹಿಸ್ಟಿಡೈನ್ ಹೈಡ್ರೋಕ್ಲೋರೈಡ್ ಮೊನೋಹೈಡ್ರೇಟ್, ಮ್ಯಾಗ್ನೀಷಿಯಂ ಕ್ಲೋರೈಡ್ ಹೆಕ್ಸಾಹೈಡ್ರೇಟ್, ಪೋಲಿಸೋರ್ಬೆಟ್, ಎಥನಾಲ್, ಸುಕ್ರೋಸ್, ಸೋಡಿಯಂ ಕ್ಲೋರೈಡ್, ಡೈಸೋಡಿಯಂ ಎಡಿಟೇಟ್ ಡಿಹೈಡ್ರೇಟ್ ಹಾಗೂ ಇಂಜೆಕ್ಷನ್ ವಾಟರ್ ಬಳಕೆ ಮಾಡಿದ್ದೇವೆ ಎಂದು ಸೇರಮ್ ಮಾಹಿತಿ ನೀಡಿದೆ.
ಅಲ್ಲದೇ ಕೋವಿಶೀಲ್ಡ್ ಲಸಿಕೆಯನ್ನ ಪಡೆಯುವ ಮುನ್ನ ಆ ವ್ಯಕ್ತಿಯು ತನ್ನ ಆರೋಗ್ಯ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಒಂದು ವೇಳೆ ಯಾವುದಾದರೂ ಔಷಧಿಗಳಿಗೆ ಬಳಕೆ ಮಾಡಲಾಗುವ ಡ್ರಗ್, ಅಥವಾ ಆಹಾರದಿಂದ ನಿಮಗೆ ಅಲರ್ಜಿ ಇದ್ದಲಿ ನೀವು ಲಸಿಕೆ ಪಡೆಯಲೇಬೇಡಿ ಎಂದು ಸೇರಮ್ ಹೇಳಿದೆ.
ಜ್ವರದ ಲಕ್ಷಣ, ಗರ್ಭಿಣಿ, ಗರ್ಭಿಣಿಯಾಗುವ ತಯಾರಿಯಲ್ಲಿ ಇರುವವರು ಹಾಗೂ ಬಾಣಂತಿಯರು ಈ ಲಸಿಕೆಯನ್ನ ಪಡೆಯಲೇಬೇಡಿ ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ನೀವು ಈಗಾಗಲೇ ಬೇರೆ ಲಸಿಕೆಯ ಡೋಸ್ ಪಡೆದಿದ್ದರೆ ಅದರ ಬಗ್ಗೆಯೂ ಮಾಹಿತಿ ನೀಡುವಂತೆ ಕೇಳಿದೆ.