ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ರೈಲುಗಳ ಎಸಿ ಕೋಚ್ಗಳಲ್ಲಿ ಅಳವಡಿಸಲಾಗಿದ್ದ ಕರ್ಟನ್ಗಳನ್ನ ತೆರವು ಮಾಡಲು ನಿರ್ಧರಿಸಿದೆ.
ಈ ಕರ್ಟನ್ಗಳ ಜಾಗದಲ್ಲಿ ಸ್ವಿಚ್ ವಿಂಡೋಗಳನ್ನ ಅಳವಡಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ.
ರಾಜಧಾನಿ, ಶತಾಬ್ದಿ ಹಾಗೂ ಎಕ್ಸ್ಪ್ರೆಸ್ ರೈಲುಗಳಲ್ಲಿನ ಎಸಿ ಕೋಚ್ಗಳಲ್ಲಿ ಹಾಕಿದ್ದ ಕರ್ಟನ್ಗಳನ್ನ ತೆಗೆದು ಹಾಕೋದಾಗಿ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಆದರೆ ಕರ್ಟನ್ಗಳನ್ನ ತೆಗೆದು ಹಾಕೋದ್ರಿಂದ ಪ್ರಯಾಣಿಕರಿಗೆ ಸೂರ್ಯನ ಬೆಳಕು ಕಾಟವಾಗಬಹುದು. ಇದರಿಂದ ಪ್ರಯಾಣ ಕಿರಿಯಾಗಬಹುದು. ಹೀಗಾಗಿ ಸ್ವಿಚ್ ವಿಂಡೋಗಳನ್ನ ಅಳವಡಿಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.
ಹಾವ್ರೋ – ದೆಹಲಿ ಎಸಿ ಸ್ಪೆಶಲ್ ಕೋಚ್ನಲ್ಲಿ ಮೊದಲ ಸ್ಮಾರ್ಟ್ ಸ್ವಿಚೆಬಲ್ ಕಿಟಕಿಗಳನ್ನ ಅಳವಡಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.