
ಮಾಸ್ಕ್ ಧರಿಸಿದ್ರೆ ಕರೊನಾ ಹರಡುವಿಕೆಯನ್ನ ನಿಯಂತ್ರಿಸಬಹುದು ಅಂತಾ ಮಂತ್ರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಹೇಳ್ತಾನೇ ಇರ್ತಾರೆ. ಇದೀಗ ಇವರ ಈ ಮಾತಿಗೆ ಪುಷ್ಠಿ ನೀಡುವಂತಹ ವರದಿಯೊಂದು ಬಹಿರಂಗವಾಗಿದೆ .
ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ ಅಧ್ಯಯನದಲ್ಲಿ ಫೇಸ್ ಮಾಸ್ಕ್ನಿಂದ ಕರೊನಾ ನಿಯಂತ್ರಣವಾಗುತ್ತೆ ಅನ್ನೋ ಅಂಶ ಬಯಲಾಗಿದೆ. ನಾವು ಸೀನಿದಾಗ ಅಥವಾ ಕೆಮ್ಮಿದಾಗ ನಮ್ಮ ದೇಹದಲ್ಲಿನ ವೈರಸ್ ವಾತಾವರಣಕ್ಕೆ ಸೇರಿಕೊಳ್ಳುತ್ತೆ. ಆದರೆ ಫೇಸ್ ಮಾಸ್ಕ್ ಧರಿಸಿದ ವ್ಯಕ್ತಿ ಕೆಮ್ಮಿದಾಗ ಹೊರಹೊಮ್ಮುವ ವೈರಸ್ನ ಕಣಗಳು 23 ಪಟ್ಟು ಚಿಕ್ಕದಾಗಿ ಇರುತ್ತವಂತೆ.
ಆದರೆ ಮಾಸ್ಕ್ ಹಾಕದ ವ್ಯಕ್ತಿ ಸೀನಿದಾಗ ಹೊರಹೊಮ್ಮುವ ವೈರಸ್ ಸರ್ಜಿಕಲ್ ಮಾಸ್ಕ್ ಹಾಕಿದ ವ್ಯಕ್ತಿ ಹೊರಹಾಕಿದ ವೈರಸ್ಗಿಂತ 7 ಪಟ್ಟು ದೊಡ್ಡ ಹಾಗೂ ಎನ್ 95 ಮಾಸ್ಕ್ ಹಾಕಿದ ವ್ಯಕ್ತಿ ಹೊರಹಾಕುವ ವೈರಸ್ಗಿಂತ 23 ಪಟ್ಟು ದೊಡ್ಡದಾಗಿ ಇರಲಿದೆ.
ಅಲ್ಲದೇ ಕೆಮ್ಮಿದಾಗ ಅಥವಾ ಸೀನಿದಾಗ ಹೊರಹೋಗುವ ವೈರಸ್ ವಾತಾವರಣದಲ್ಲಿ 5ರಿಂದ 8 ಸೆಕೆಂಡ್ಗಳ ಕಾಲ ಜೀವಂತವಾಗಿ ಇರುತ್ತೆ ಎಂದು ಅಧ್ಯಯನ ಹೇಳಿದೆ.
ಸೀನುವಾಗ ಕೈ ಅಡ್ಡ ಹಿಡಿಯೋದು ಅಥವಾ ಕರವಸ್ತ್ರ ಅಡ್ಡ ಹಿಡಿಯೋದರಿಂದ ವೈರಸ್ ಹರಡುವಿಕೆ ಪ್ರಮಾಣ ಕಡಿಮೆ ಮಾಡಬಹುದಾಗಿದೆ. ಆದರೆ ಇವೆರಡು ಈಗಿನ ಪರಿಸ್ಥಿತಿಯಲ್ಲಿ ಸುರಕ್ಷಿತವಾದ ಕ್ರಮವಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುರುವ ಫೇಸ್ ಮಾಸ್ಕ್ ಮಾತ್ರ ವೈರಸ್ನಿಂದ ಕಾಪಾಡಿಕೊಳ್ಳಲು ಸುರಕ್ಷಿತ ಮಾರ್ಗವಾಗಿದೆ.