alex Certify ಕೊರೊನಾ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಏರಿಕೆಯಾಗುತ್ತಿದೆ ಚೇತರಿಕೆ ಪ್ರಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಏರಿಕೆಯಾಗುತ್ತಿದೆ ಚೇತರಿಕೆ ಪ್ರಮಾಣ

ದಿನೇ ದಿನೇ ಏರಿಕೆಯಾಗುತ್ತಲೇ ಇರುವ ಕೋವಿಡ್-19 ಸೋಂಕು ಪೀಡಿತರ ಚೇತರಿಕೆ ಪ್ರಮಾಣವು 90% ಎಲ್ಲೆ ದಾಟಿದೆ. ಒಟ್ಟಾರೆ 70,78,123 ಮಂದಿ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಮತ್ತೊಂದು ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ, ಕಳೆದ 24 ಗಂಟೆಗಳ ಅವಧಿಯಲ್ಲಿ 50,129 ಮಂದಿ ಕೋವಿಡ್-19 ಸೋಂಕಿತರಾಗಿ ಕಂಡುಬಂದಿದ್ದರೆ, 62,077 ಮಂದಿ ಸೋಂಕಿತರು ಇದೇ ಅವಧಿಯಲ್ಲಿ ಚೇತರಿಕೆ ಕಂಡಿದ್ದಾರೆ.

ಸದ್ಯ ದೇಶದಲ್ಲಿ ಕೇವಲ 6,68,154 ಸಕ್ರಿಯ ಕೋವಿಡ್-19 ಪ್ರಕರಣಗಳು ಮಾತ್ರ ಇದ್ದು, ಒಟ್ಟಾರೆ ಸೋಂಕಿತರ ಪೈಕಿ ಕೇವಲ 8.5%ನಷ್ಟು ಜನ ಮಾತ್ರವೇ ಸಕ್ರಿಯವಾಗಿ ಸೋಂಕಿತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಇದೇ ವೇಳೆ, ದೇಶದಲ್ಲಿ ಕೋವಿಡ್-19 ಪರೀಕ್ಷೆ ಮಾಡುವ ಪ್ರಯೋಗಾಲಯಗಳ ಸಂಖ್ಯೆಯೂ ಸಹ ಹೆಚ್ಚಿದ್ದು, ದೇಶದಲ್ಲಿ ಸದ್ಯ 2000ಕ್ಕೂ ಹೆಚ್ಚು ಲ್ಯಾಬೋರೇಟರಿಗಳು ಇದಕ್ಕೆಂದೇ ಕೆಲಸ ಮಾಡುತ್ತಿವೆ. ಸರ್ಕಾರದ 1,126 ಹಾಗೂ ಖಾಸಗಿಯ 877 ಪ್ರಯೋಗಾಲಯಗಳು ಕೋವಿಡ್-19 ಪತ್ತೆ ಮಾಡಲು ನೆರವಾಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...