alex Certify ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ದೇಶದ ಜನತೆ ಅತಿ ಹೆಚ್ಚು ಹಣ ವ್ಯಯಿಸಿದ್ದೆಲ್ಲಿ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ದೇಶದ ಜನತೆ ಅತಿ ಹೆಚ್ಚು ಹಣ ವ್ಯಯಿಸಿದ್ದೆಲ್ಲಿ ಗೊತ್ತಾ….?

ವರ್ಷಗಳೇ ಉರುಳಿದ್ರೂ ಸಹ ಕೊರೊನಾ ವೈರಸ್​ ಸೋಂಕು ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ದೇಶದಲ್ಲಿ ಇನ್ನೇನು ಕೊರೊನಾ ಸೋಂಕು ಕಡಿಮೆ ಆಗೇ ಹೋಯ್ತು ಅನ್ನೋ ಅಷ್ಟರಲ್ಲೇ ಇದೀಗ ಮತ್ತೆ ಡೆಡ್ಲಿ ವೈರಸ್​ ತನ್ನ ರುದ್ರನರ್ತನವನ್ನ ಶುರುವಿಟ್ಟುಕೊಂಡಿದೆ.

2020ರಲ್ಲಿ ನಡೆಸಲಾದ ಸಾಕಷ್ಟು ಅಧ್ಯಯನಗಳ ಪ್ರಕಾರ ಕೊರೊನಾ ವೈರಸ್​​ನಿಂದಾಗಿ ದೇಶದ ಆಹಾರ ಪೂರೈಕೆಯಲ್ಲಿ ಸಮಸ್ಯೆ, ನಿರುದ್ಯೋಗದಂತಹ ಸಾಕಷ್ಟು ಸಮಸ್ಯೆಗಳು ದೇಶದಲ್ಲಿ ಹೆಚ್ಚಾಗಿದೆ ಎಂದು ಹೇಳಿದೆ.

ಕೋವಿಡ್​ 19 ಎಂಟ್ರಿ ಬಳಿಕ ಮನೆಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಭಾರತೀಯ ಆರ್ಥಿಕತೆ ಮೇಲ್ವಿಚಾರಕ ಕೇಂದ್ರ ಸಿಎಂಐಇ ಮಾಹಿತಿಯೊಂದನ್ನ ಬಿಡುಗಡೆ ಮಾಡಿದೆ. ಲಾಕ್​ಡೌನ್​​​ ನಿರ್ಬಂಧಗಳಿಂದಾಗಿ ಮನೆಗಳ ಮೇಲೆ ಉಂಟಾದ ಕೆಲ ಪರಿಣಾಮವನ್ನ ಪಿರಾಮಿಡ್​ ನಕ್ಷೆಯ ಮೂಲಕ ವಿವರಿಸಲಾಗಿದೆ.

ಪಿರಾಮಿಡ್​​ ನಕ್ಷೆಯ ಮೂಲಕ ಜೂನ್​ 2019 ಹಾಗೂ ಜೂನ್​ 2020ರ ಮನೆಗಳ ನಿರ್ವಹಣೆಯಲ್ಲಾದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮೊದಲನೆಯದಾಗಿ ಏಪ್ರಿಲ್​ 2019 ಹಾಗೂ ಅಕ್ಟೋಬರ್​ 2020ರಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲಿಯೂ ಗೃಹ ವೆಚ್ಚದಲ್ಲಿ ಇಳಿಕೆ ಕಂಡು ಬಂದಿದೆ. ಅಶೋಕ ವಿಶ್ವವಿದ್ಯಾಲಯದ ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆ ಕೇಂದ್ರ ನೀಡಿರುವ ಈ ವರದಿಯಲ್ಲಿ ಗೃಹ ವೆಚ್ಚದಲ್ಲಿ ಶೇಕಡಾ 35ರಷ್ಟು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಆದಾಯದ ಮೊತ್ತ ಕಡಿಮೆಯಾಗಿರೋದೇ ಗೃಹ ಖರ್ಚುಗಳಲ್ಲಿ ಕುಸಿತ ಕಾಣೋಕೆ ಮುಖ್ಯ ಕಾರಣ ಎಂದು ಈ ವರದಿ ಹೇಳಿದೆ. ಇನ್ನು ಜೂನ್​ 2019ರಲ್ಲಿ ಆರೋಗ್ಯದ ದೃಷ್ಟಿಯಿಂದ ಅಂದರೆ ವೈದ್ಯಕೀಯ ತಪಾಸಣೆಗಾಗಿ ಒಟ್ಟು ಖರ್ಚಿನ ಶೇಕಡಾ 4 ಭಾಗವನ್ನ ಮೀಸಲಿಡಲಾಗಿತ್ತು. ಆದರೆ ಜೂನ್​ 2020ರಲ್ಲಿ ವೈದ್ಯಕೀಯ ತಪಾಸಣೆಗೆ ಖರ್ಚು ಮಾಡಿದ ಹಣ 1 ಪ್ರತಿಶತ ಕಡಿಮೆಯಾಗಿದೆ ಎಂದು ಹೇಳಿದೆ.

ಈ ರೀತಿ ವೈದ್ಯಕೀಯ ತಪಾಸಣೆಯಲ್ಲಿ ಉಳಿಕೆಯಾದ ಹಣ ಮನೆಯ ಆಹಾರ ಪದಾರ್ಥಗಳು ಹಾಗೂ ದಿನಸಿಯ ಮೇಲೆ ವೆಚ್ಚ ಮಾಡಲಾಗಿದೆ. ದೇಶದ ಇನ್ನೂ ಕೆಲ ನಗರಗಳಲ್ಲಿ ಪಿಪಿಇ ಕಿಟ್​, ಮಾಸ್ಕ್​​ನಂತಹ ವೈದ್ಯಕೀಯ ಅಸ್ತ್ರಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...