alex Certify ಹೊಸ ಅಧ್ಯಯನದಲ್ಲಿ ಬಯಲಾಗಿದೆ ʼಮಾಸ್ಕ್ʼ ಕುರಿತ ಕುತೂಹಲಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಅಧ್ಯಯನದಲ್ಲಿ ಬಯಲಾಗಿದೆ ʼಮಾಸ್ಕ್ʼ ಕುರಿತ ಕುತೂಹಲಕಾರಿ ಮಾಹಿತಿ

ಕಳೆದೊಂದು ವರ್ಷದಿಂದ ಜನತೆ ಕೊರೊನಾ ವೈರಸ್​ ವಿರುದ್ಧ ತಮ್ಮನ್ನ ತಾವು ರಕ್ಷಿಸಿಕೊಳ್ಳೋಕೆ ಮಾಸ್ಕ್​ಗಳನ್ನ ಬಳಕೆ ಮಾಡ್ತಿದ್ದಾರೆ. ಈ ಮಾಸ್ಕ್​ಗಳ ಸಂಬಂಧ ನಡೆಸಲಾದ ಹೊಸ ಅಧ್ಯಯನವೊಂರದಲ್ಲಿ 2 ಮಾಸ್ಕ್​ಗಳನ್ನ ಒಟ್ಟಿಗೆ ಧರಿಸೋದ್ರಿಂದ ಕೊರೊನಾದಂತಹ ವೈರಸ್​ಗಳಿಂದ ನಮ್ಮನ್ನ ನಾವು ಹೆಚ್ಚಿನ ಪ್ರಮಾಣದಲ್ಲಿ ರಕ್ಷಿಸಿಕೊಳ್ಳಬಹುದಂತೆ.

ಎರಡೆರಡು ಮಾಸ್ಕ್​​ಗಳ ಬಳಕೆ ವಿಚಾರವಾಗಿ ಮಾತನಾಡಿ ಏಮ್ಸ್ ನಿರ್ದೇಶಕ ಡಾ. ರಂದೀಪ್​ ಗುಲೇರಿಯಾ, ಎನ್​ 95 ಮಾಸ್ಕ್​ಗಳು ಕೊರೊನಾ ವಿರುದ್ಧ ತುಂಬಾನೇ ಒಳ್ಳೆಯದು. ಆದರೆ ಅವು ಕೊಂಚ ದುಬಾರಿ ಹಾಗೂ ಎಲ್ಲಾ ಬಾರಿಯೂ ಸಿಗೋದಿಲ್ಲ. ಇದಕ್ಕಾಗಿ ಉತ್ತಮ ಪ್ಲಾನ್​ ಎಂದರೆ ಎರಡು ಮಾಸ್ಕ್​ಗಳ ಬಳಕೆ. ಸರ್ಜಿಕಲ್​ ಮಾಸ್ಕ್​ ಹಾಗೂ ಬಟ್ಟೆಯ ಮಾಸ್ಕ್​ಗಳನ್ನ ಬಳಕೆ ಮಾಡೋದ್ರಿಂದ ಕೊರೊನಾದಿಂದ ಇನ್ನೂ ಹೆಚ್ಚು ಸೇಫ್​ ಆಗಿ ಇರಬಹುದಾಗಿದೆ. ಇದೂ ಸಾಧ್ಯವಿಲ್ಲ ಅಂತಂದ್ರೆ ಎರಡು ಬಟ್ಟೆಯಿಂದ ಮಾಡಲ್ಪಟ್ಟ ಮಾಸ್ಕ್​ಗಳನ್ನೇ ಬಳಕೆ ಮಾಡಿ ಎಂದು ಅವರು ಹೇಳಿದ್ರು.

ಎನ್​​ 95 ಮಾಸ್ಕ್​ಗಳು 95 ಪ್ರತಿಶತ ಫಿಲ್ಟರ್​ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಸರ್ಜಿಕಲ್​ ಮಾಸ್ಕ್​ಗಳು 85 ರಿಂದ 90 ಪ್ರತಿಶತ ಸುರಕ್ಷಿತವಾಗಿದೆ. ಮಾಸ್ಕ್ ಧರಿಸುವ ವೇಳೆಯೂ ಸರಿಯಾದ ಕ್ರಮವನ್ನ ಬಳಕೆ ಮಾಡಬೇಕು. ನೀವು ಮಾಸ್ಕ್​ ಹಾಕಿಕೊಂಡ ರೀತಿಯಿಂದ ಮೂಗಿನೊಳಕ್ಕೆ ಶುದ್ಧ ಗಾಳಿ ಹೋಗುತ್ತಿದ್ದೆಯೇ ಇಲ್ಲವೇ ಅನ್ನೋದು ನಿರ್ಧಾರವಾಗುತ್ತೆ. ಮಾಸ್ಕ್​ ಸರಿಯಾಗಿ ಹಾಕಿಕೊಳ್ಳದೇ ಹೋದಲ್ಲಿ ನೀವು ಸೋಂಕಿಗೆ ಒಳಗಾಗೋ ಸಾಧ್ಯತೆ ಇದೆ ಅಂತಾ ಗುಲೇರಿಯಾ ಹೇಳಿದ್ರು.

ಜಾಮಾ ಇಂಟರ್ನಲ್​ ಮೆಡಿಸಿನ್​ ಜರ್ನಲ್​ನಲ್ಲಿ ಪ್ರಕಟವಾದ ಬರಹದಲ್ಲಿ ಎರಡು ಮಾಸ್ಕ್​ಗಳ ಬಳಕೆಯಿಂದ ಪರದೆಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಗಾಳಿ ಇನ್ನಷ್ಟು ಫಿಲ್ಟರ್​ ಆಗಲಿದೆ. ಅಲ್ಲದೇ ಈ ಮಾಸ್ಕ್​ಗಳು ನಿಮ್ಮ ಮುಖಕ್ಕೆ ಸರಿಯಾಗಿ ಫಿಟ್​ ಆಗುವಂತೆ ಇರಬೇಕು ಎಂದು ನಾರ್ತ್ ಕ್ಯಾರೋಲಿನಾ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿಕ್​ಬರ್ಟ್​ ಬೆನ್ನೆಟ್​ ಬರೆದಿದ್ದಾರೆ.

ಸರ್ಜಿಕಲ್​ ಮಾಸ್ಕ್​ಗಳ ಮೇಲೆ ಬಟ್ಟೆಯಿಂದ ಮಾಡಲಾದ ಮಾಸ್ಕ್​ಗಳನ್ನ ಧರಿಸೋದ್ರಿಂದ ಫಿಲ್ಟರೇಷನ್​ ಸಾಮರ್ಥ್ಯ ಇನ್ನಷ್ಟು ಸುಧಾರಿಸಲಿದೆ. ಈ ಸರ್ಜಿಕಲ್​ ಮಾಸ್ಕ್​ಗಳ ಜೊತೆಯಲ್ಲಿ ಸ್ಲೀವ್ ಟೈಪ್​ ಮಾಸ್ಕ್​ಗಳನ್ನ ಹಾಕೋದ್ರಿಂದ ಇನ್ನಷ್ಟು ಸೋಂಕಿನ ಅಪಾಯದಿಂದ ಪಾರಾಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...