ಕಳೆದೊಂದು ವರ್ಷದಿಂದ ಜನತೆ ಕೊರೊನಾ ವೈರಸ್ ವಿರುದ್ಧ ತಮ್ಮನ್ನ ತಾವು ರಕ್ಷಿಸಿಕೊಳ್ಳೋಕೆ ಮಾಸ್ಕ್ಗಳನ್ನ ಬಳಕೆ ಮಾಡ್ತಿದ್ದಾರೆ. ಈ ಮಾಸ್ಕ್ಗಳ ಸಂಬಂಧ ನಡೆಸಲಾದ ಹೊಸ ಅಧ್ಯಯನವೊಂರದಲ್ಲಿ 2 ಮಾಸ್ಕ್ಗಳನ್ನ ಒಟ್ಟಿಗೆ ಧರಿಸೋದ್ರಿಂದ ಕೊರೊನಾದಂತಹ ವೈರಸ್ಗಳಿಂದ ನಮ್ಮನ್ನ ನಾವು ಹೆಚ್ಚಿನ ಪ್ರಮಾಣದಲ್ಲಿ ರಕ್ಷಿಸಿಕೊಳ್ಳಬಹುದಂತೆ.
ಎರಡೆರಡು ಮಾಸ್ಕ್ಗಳ ಬಳಕೆ ವಿಚಾರವಾಗಿ ಮಾತನಾಡಿ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ, ಎನ್ 95 ಮಾಸ್ಕ್ಗಳು ಕೊರೊನಾ ವಿರುದ್ಧ ತುಂಬಾನೇ ಒಳ್ಳೆಯದು. ಆದರೆ ಅವು ಕೊಂಚ ದುಬಾರಿ ಹಾಗೂ ಎಲ್ಲಾ ಬಾರಿಯೂ ಸಿಗೋದಿಲ್ಲ. ಇದಕ್ಕಾಗಿ ಉತ್ತಮ ಪ್ಲಾನ್ ಎಂದರೆ ಎರಡು ಮಾಸ್ಕ್ಗಳ ಬಳಕೆ. ಸರ್ಜಿಕಲ್ ಮಾಸ್ಕ್ ಹಾಗೂ ಬಟ್ಟೆಯ ಮಾಸ್ಕ್ಗಳನ್ನ ಬಳಕೆ ಮಾಡೋದ್ರಿಂದ ಕೊರೊನಾದಿಂದ ಇನ್ನೂ ಹೆಚ್ಚು ಸೇಫ್ ಆಗಿ ಇರಬಹುದಾಗಿದೆ. ಇದೂ ಸಾಧ್ಯವಿಲ್ಲ ಅಂತಂದ್ರೆ ಎರಡು ಬಟ್ಟೆಯಿಂದ ಮಾಡಲ್ಪಟ್ಟ ಮಾಸ್ಕ್ಗಳನ್ನೇ ಬಳಕೆ ಮಾಡಿ ಎಂದು ಅವರು ಹೇಳಿದ್ರು.
ಎನ್ 95 ಮಾಸ್ಕ್ಗಳು 95 ಪ್ರತಿಶತ ಫಿಲ್ಟರ್ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಸರ್ಜಿಕಲ್ ಮಾಸ್ಕ್ಗಳು 85 ರಿಂದ 90 ಪ್ರತಿಶತ ಸುರಕ್ಷಿತವಾಗಿದೆ. ಮಾಸ್ಕ್ ಧರಿಸುವ ವೇಳೆಯೂ ಸರಿಯಾದ ಕ್ರಮವನ್ನ ಬಳಕೆ ಮಾಡಬೇಕು. ನೀವು ಮಾಸ್ಕ್ ಹಾಕಿಕೊಂಡ ರೀತಿಯಿಂದ ಮೂಗಿನೊಳಕ್ಕೆ ಶುದ್ಧ ಗಾಳಿ ಹೋಗುತ್ತಿದ್ದೆಯೇ ಇಲ್ಲವೇ ಅನ್ನೋದು ನಿರ್ಧಾರವಾಗುತ್ತೆ. ಮಾಸ್ಕ್ ಸರಿಯಾಗಿ ಹಾಕಿಕೊಳ್ಳದೇ ಹೋದಲ್ಲಿ ನೀವು ಸೋಂಕಿಗೆ ಒಳಗಾಗೋ ಸಾಧ್ಯತೆ ಇದೆ ಅಂತಾ ಗುಲೇರಿಯಾ ಹೇಳಿದ್ರು.
ಜಾಮಾ ಇಂಟರ್ನಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಬರಹದಲ್ಲಿ ಎರಡು ಮಾಸ್ಕ್ಗಳ ಬಳಕೆಯಿಂದ ಪರದೆಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಗಾಳಿ ಇನ್ನಷ್ಟು ಫಿಲ್ಟರ್ ಆಗಲಿದೆ. ಅಲ್ಲದೇ ಈ ಮಾಸ್ಕ್ಗಳು ನಿಮ್ಮ ಮುಖಕ್ಕೆ ಸರಿಯಾಗಿ ಫಿಟ್ ಆಗುವಂತೆ ಇರಬೇಕು ಎಂದು ನಾರ್ತ್ ಕ್ಯಾರೋಲಿನಾ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿಕ್ಬರ್ಟ್ ಬೆನ್ನೆಟ್ ಬರೆದಿದ್ದಾರೆ.
ಸರ್ಜಿಕಲ್ ಮಾಸ್ಕ್ಗಳ ಮೇಲೆ ಬಟ್ಟೆಯಿಂದ ಮಾಡಲಾದ ಮಾಸ್ಕ್ಗಳನ್ನ ಧರಿಸೋದ್ರಿಂದ ಫಿಲ್ಟರೇಷನ್ ಸಾಮರ್ಥ್ಯ ಇನ್ನಷ್ಟು ಸುಧಾರಿಸಲಿದೆ. ಈ ಸರ್ಜಿಕಲ್ ಮಾಸ್ಕ್ಗಳ ಜೊತೆಯಲ್ಲಿ ಸ್ಲೀವ್ ಟೈಪ್ ಮಾಸ್ಕ್ಗಳನ್ನ ಹಾಕೋದ್ರಿಂದ ಇನ್ನಷ್ಟು ಸೋಂಕಿನ ಅಪಾಯದಿಂದ ಪಾರಾಗಬಹುದಾಗಿದೆ.