ಕೊರೊನಾ ವೈರಸ್ ದೇಶಕ್ಕೆ ಎಂಟ್ರಿ ಕೊಟ್ಟು ಒಂದು ವರ್ಷದ ಮೇಲಾದ್ರೂ ಸಹ ಇನ್ನೂ ಡೆಡ್ಲಿ ವೈರಸ್ನಿಂದ ಚೇತರಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ. ಇದೀಗ ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದೆ. ಕಳೆದ ಕೆಲ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಹೊಸ ಕೇಸ್ಗಳು ವರದಿಯಾಗಿವೆ.
ದೇಶದಲ್ಲಿ ಈವರೆಗೆ 1.32 ಕೋಟಿ ಮಂದಿ ಕೊರೊನಾದಿಂದ ಪಾರಾಗಿದ್ದಾರೆ ಆದರೆ 21.57 ಲಕ್ಷ ಮಂದಿ ಇನ್ನೂ ಕೊರೊನಾ ವಿರುದ್ದ ಹೋರಾಡುತ್ತಲೇ ಇದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕೆಲವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೀವೇನಾದರು ಸೌಮ್ಯ ಪ್ರಮಾಣದಲ್ಲಿ ಜ್ವರ, ತಲೆನೋವು, ಮೂಗು ಬ್ಲಾಕ್ ಆಗೋದು, ಗಂಟಲು ನೋವು ಹಾಗೂ ರುಚಿ ಹಾಗೂ ವಾಸನೆ ಗ್ರಹಿಕೆ ಸಾಮರ್ಥ್ಯವನ್ನ ಕಳೆದುಕೊಂಡಿದ್ದೀರಾ ಅಂದರೆ ಈ ಹಂತಗಳನ್ನ ಪಾಲಿಸಿ.
ಮೊದಲು ನಿಮ್ಮನ್ನ ನೀವು ಐಸೋಲೇಟ್ ಮಾಡಿಕೊಳ್ಳಿ. ಕುಟುಂಬಸ್ಥರಿಂದ ಆಪ್ತರಿಂದ ಅಂತರ ಕಾಯ್ದುಕೊಳ್ಳಿ. ಆದಷ್ಟು ನಿಮ್ಮ ಸ್ನಾನಗೃಹ ಹಾಗೂ ಶೌಚಾಲಯ ಕೂಡ ಪ್ರತ್ಯೇಕವಾಗಿಟ್ಟುಕೊಂಡರೆ ತುಂಬಾನೇ ಒಳ್ಳೆಯದು. ವೈದ್ಯರ ಸಲಹೆಯಂತೆ ಔಷಧಿಗಳನ್ನ ಸ್ವೀಕರಿಸಿ. ನಿಮ್ಮ ಜ್ವರ ಹಾಗೂ ಆಮ್ಲಜನಕ ಮಟ್ಟವನ್ನ ಆಗಾಗ ಪರೀಕ್ಷೆ ಮಾಡಿಸಿಕೊಳ್ಳುತ್ತಲೇ ಇರಿ.
ಮನೆಯಲ್ಲೇ ಇರುವಾಗ ರೆಮಿಡಿಸಿವರ್ನಂತಹ ಚುಚ್ಚುಮದ್ದುಗಳನ್ನ ನೀವಾಗೇ ತೆಗೆದುಕೊಳ್ಳುವ ನಿರ್ಧಾರಕ್ಕೆ ಬರಬೇಡಿ. ಇಂತಹ ಚುಚ್ಚುಮದ್ದುಗಳನ್ನ ವೈದ್ಯರ ಸಲಹೆ ಇಲ್ಲದೇ ತೆಗೆದುಕೊಳ್ಳೋದು ತುಂಬಾನೇ ಅಪಾಯಕಾರಿ.
ಕೆಮ್ಮು, ಒಂದು ವಾರ ಕಳೆದ್ರೂ ನಿಲ್ಲದ ಜ್ವರ, ಹಾಗೂ ಆಮ್ಲಜನಕ ಮಟ್ಟ 94 ಪ್ರತಿಶತಕ್ಕಿಂತ ಕಡಿಮೆ ಇದ್ದಲ್ಲಿ ಈ ರೀತಿ ಮಾಡಿ :
ನಿಮ್ಮ ಜ್ವರ ಹಾಗೂ ಆಮ್ಲಜನಕ ಮಟ್ಟ ಏರಿಳಿತದ ಬಗ್ಗೆ ಒಂದು ಕಣ್ಣಿಟ್ಟಿಡಿ. ಫೋನ್ ಕಾಲ್ ಮೂಲಕ ವೈದ್ಯರ ಸಂಪರ್ಕದಲ್ಲಿರಿ. ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾಗಲು ತಯಾರಿ ನಡೆಸಿ. ಹಾಗೂ ಆಮ್ಲಜನಕ ಸಿಲಿಂಡರ್ಗೂ ವ್ಯವಸ್ಥೆ ಮಾಡಿಕೊಳ್ಳಿ.
ವೈದ್ಯರು ಸಲಹೆ ನೀಡದ ಹೊರತು ಯಾವುದೇ ಔಷಧಿಗಳ ಸೇವನೆ ಒಳ್ಳೆಯದಲ್ಲ. ಆರೋಗ್ಯ ಬಿಗಡಾಯಿಸಿದರೆ ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾಗಿ.