ನವದೆಹಲಿ: ಕೊರೋನಾ ವಿರುದ್ಧದ ಲಸಿಕೆಯ ರಿಸ್ಕ್ ಉತ್ಪಾದನೆಯನ್ನು ಆರಂಭಿಸಲಾಗಿದೆ. ಭಾರತದ ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯ ರಿಸ್ಕ್ ಉತ್ಪಾದನೆ ಆರಂಭಿಸಲಾಗಿದೆ.
ಉತ್ಪಾದನೆಗೆ ಅನುಮೋದನೆ ಪಡೆಯುವ ಮೊದಲೇ ಲಸಿಕೆ ಉತ್ಪಾದಿಸುವುದನ್ನು ರಿಸ್ಕ್ ಉತ್ಪಾದನೆ ಎನ್ನಲಾಗುತ್ತದೆ. ಹೈದರಾಬಾದ್ ನ ಭಾರತ್ ಬಯೋಟೆಕ್ ನಿಂದ ಕೊರೋನಾ ವಿರುದ್ಧದ ಲಸಿಕೆ ಕೋವ್ಯಾಕ್ಸಿನ್ ರಿಸ್ಕ್ ಲಸಿಕೆ ಉತ್ಪಾದನೆಯನ್ನು ಆರಂಭಿಸಲಾಗಿದೆ.
ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಒಪ್ಪಿಗೆ ದೊರೆತಿದೆ. ಡಿಸಿಜಿಐ ತಜ್ಞರ ಸಮಿತಿಯಿಂದ ಈಗಾಗಲೇ ಒಪ್ಪಿಗೆ ಸಿಕ್ಕಿದ್ದು ಸದ್ಯ ಎರಡು ಲಸಿಕೆ ಉತ್ಪಾದನಾ ಘಟಕವನ್ನು ಕಂಪನಿ ಹೊಂದಿದೆ. ಎರಡು ಘಟಕಗಳಿಂದ ವರ್ಷಕ್ಕೆ 15 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡಲಾಗುವುದು. ಹೀಗಾಗಿ ಮೂರನೇ ಘಟಕ ಆರಂಭಕ್ಕೆ ಭಾರತ್ ಬಯೋಟೆಕ್ ಪ್ರಯತ್ನ ನಡೆಸಿದೆ. ಮೂರನೇ ಉತ್ಪಾದನೆ ಘಟಕ ಆರಂಭಕ್ಕೆ 100 ರಿಂದ 150 ಕೋಟಿ ರೂಪಾಯಿ ಬೇಕಾಗಬಹುದು ಎಂದು ಹೇಳಲಾಗಿದೆ.