alex Certify BIG NEWS: 12 ವರ್ಷ ಮೇಲ್ಪಟ್ಟವರ ಮೇಲೂ ಕೊರೊನಾ ಲಸಿಕೆ ಕ್ಲಿನಿಕಲ್ ಪ್ರಯೋಗ ನಡೆಸಲು ಡಿಸಿಜಿಐ ಗ್ರೀನ್ ಸಿಗ್ನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 12 ವರ್ಷ ಮೇಲ್ಪಟ್ಟವರ ಮೇಲೂ ಕೊರೊನಾ ಲಸಿಕೆ ಕ್ಲಿನಿಕಲ್ ಪ್ರಯೋಗ ನಡೆಸಲು ಡಿಸಿಜಿಐ ಗ್ರೀನ್ ಸಿಗ್ನಲ್

ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ಗೆ ಸೇರಿದ ಕೋವಾಕ್ಸಿನ್​​​ನ್ನು 12 ವರ್ಷ ಮೇಲ್ಪಟ್ಟ ಮಕ್ಕಳ ಮೇಲೂ ಕ್ಲಿನಿಕಲ್​ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಅನುಮತಿ ನೀಡಿದೆ. ಕೋವ್ಯಾಕ್ಸಿನ್​​ ಪ್ರಸ್ತುತ ತನ್ನ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗ ನಡೆಸುತ್ತಿದೆ.

ಭಾರತದಲ್ಲಿ ಕೋ ವ್ಯಾಕ್ಸಿನ್​​ ಮಾರಾಟ ಹಾಗೂ ವಿತರಣೆಗೆ ಅನುಮತಿ ನೀಡಿರುವ ಡಿಸಿಜಿಐ ಲಸಿಕೆ 1 ಹಾಗೂ 2ನೇ ಕ್ಲಿನಿಕಲ್​ ಪ್ರಯೋಗ ಆಧರಿಸಿ ಅದರ ಸುರಕ್ಷತೆ, ಪರಿಣಾಮಕಾರತ್ವದ ದಾಖಲೆಗಳನ್ನ ಸಲ್ಲಿಸುವಂತೆ ಭಾರತ್​ ಬಯೋಟೆಕ್​ಗೆ ಸೂಚನೆ ನೀಡಿದೆ.

ಇದು ಮಾತ್ರವಲ್ಲದೇ ಅಪಾಯ ನಿರ್ವಹಣೆಯನ್ನ ನಿಯಂತ್ರಿಸಲು ಭಾರತ್​ ಬಯೋಟೆಕ್​ ಮಾಡಿಕೊಂಡಿರುವ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡುವಂತೆ ಡಿಸಿಜಿಐ ಕೇಳಿದೆ. ಅಲ್ಲದೇ ಲಸಿಕೆಯ ಅಗತ್ಯ ಮಾಹಿತಿ, ಸೂಚನೆಗಳನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಸಾರ ಮಾಡುವಂತೆ ಹೇಳಿದೆ.

ಆಕ್ಸ್​ಫರ್ಡ್ – ಆಸ್ಟ್ರೆಜೆನೆಕಾದ ಕೋವಿಶೀಲ್ಡ್ ಲಸಿಕೆ ಜೊತೆಗೆ ಭಾರತದಲ್ಲಿ ಕೋವ್ಯಾಕ್ಸಿನ್​​ ತುರ್ತು ಬಳಕೆಗೂ ಅನುಮತಿ ನೀಡಲಾಗಿದೆ. ಕೇಂದ್ರದ ಈ ನಿರ್ಧಾರದ ಬಗ್ಗೆ ಅನೇಕ ತಜ್ಞರು ಪ್ರಶ್ನೆ ಎತ್ತಿದ್ದರು. ಕೋವ್ಯಾಕ್ಸಿನ್​ ಸುರಕ್ಷತೆ ಹಾಗೂ ಪರಿಣಾಮಕಾರತ್ವದ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕವೇ ಲಸಿಕೆಗೆ ತುರ್ತು ಅನುಮೋದನೆ ನೀಡಲಾಗಿದೆ ಎಂದು ಡಿಸಿಜಿಐ ಸ್ಪಷ್ಟನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...