alex Certify ದೇಶದಲ್ಲಿ ಮಿತಿಮೀರಿದ ಕೊರೊನಾ ಆರ್ಭಟ: ಡೆಡ್ಲಿ ವೈರಸ್​ನಿಂದ ಪಾರಾಗೋಕೆ ಅನುಸರಿಸಿ ಈ ಮಾರ್ಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಮಿತಿಮೀರಿದ ಕೊರೊನಾ ಆರ್ಭಟ: ಡೆಡ್ಲಿ ವೈರಸ್​ನಿಂದ ಪಾರಾಗೋಕೆ ಅನುಸರಿಸಿ ಈ ಮಾರ್ಗ

ದೇಶದಲ್ಲಿ ಕೊರೊನಾ ವೈರಸ್​ನ 2ನೇ ಅಲೆ ನಡುಕ ಹುಟ್ಟಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 43846 ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ  ಒಟ್ಟು ಕೊರೊನಾ ವೈರಸ್​ ಸಂಖ್ಯೆ 1,15,99,130 ಆಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ದನ್​, ಕೊರೊನಾ ವೈರಸ್​​ ಮಾರ್ಗಸೂಚಿಗಳನ್ನ ನಿರ್ಲಕ್ಷ್ಯ ಮಾಡುತ್ತಿರೋದೇ ದೇಶದಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಸಾಮಾಜಿಕ ಅಂತರ ಮರೆತಿದ್ದು ಹಾಗೂ ಮಾಸ್ಕ್​ಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರೋದೇ ಈ ಎಲ್ಲಾ ಅನಾಹುತಕ್ಕೆ ಕಾರಣ ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್​ 2ನೇ ಅಲೆಯಿಂದ ನಿಮ್ಮನ್ನ ನೀವು ಬಚಾವ್​ ಮಾಡಿಕೊಳ್ಳಬೇಕು ಅಂದರೆ ಏನು ಮಾಡಬೇಕು ಹಾಗೂ ಏನನ್ನ ಮಾಡಬಾರದು ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ :

ನಕಲಿ ಮದ್ಯ ಸೇವನೆ ಮಾಡಿದ್ದ ನಾಲ್ವರ ದಾರುಣ ಸಾವು

ವೈಯಕ್ತಿಕ ಸ್ವಚ್ಛತೆಯ ಕಡೆ ಹೆಚ್ಚಿನ ಗಮನ ನೀಡಿ. ಕೈಯಲ್ಲಿ ಕಡಿಮೆ ಅಂದರೂ 20 ಸೆಕೆಂಡ್​ಗಳ ಕಾಲ ತಿಕ್ಕಿ ತೊಳೆಯಿರಿ.

ಮನೆಯಿಂದ ಹೊರಹೋಗುವ ಮುನ್ನ ಸ್ಯಾನಿಟೈಸರ್​ ಬಳಕೆ ಮಾಡೋದನ್ನ ಮರೆಯದಿರಿ

ಮನೆಯಿಂದ ಹೊರ ಹೋಗುವ ಮುನ್ನ ಮಾಸ್ಕ್​ ಧರಿಸಿ.

ಕೆಮ್ಮುವಾಗ ಹಾಗೂ ಸೀನುವಾಗ ಟಿಶ್ಯೂ ಪೇಪರ್​​ಗಳನ್ನ ಅಡ್ಡ ಹಿಡಿಯಿರಿ.

ಮನೆಯಿಂದ ಹೊರಗಡೆ ಇದ್ದ ವೇಳೆ ಕೆಮ್ಮುವಾಗ ಹಾಗೂ ಸೀನುವಾಗ ಮಾಸ್ಕ್​​ಗಳನ್ನ ತೆಗೆಯಬೇಡಿ.

ಸೀನುವ ವೇಳೆ ಬಳಕೆ ಮಾಡಿದ ಟಿಶ್ಯೂ ಕಾಗದಗಳನ್ನ ಕಸದ ಬುಟ್ಟಿಯಲ್ಲೇ ಹಾಕಿ.

ಪಿಪಿಇ ಕಿಟ್​, ಫೇಸ್​ ಮಾಸ್ಕ್​ಗಳನ್ನ ವೈಜ್ಞಾನಿಕ ರೀತಿಯಲ್ಲಿ ಡಂಪ್​ ಮಾಡಿ.

ಸಾರ್ವಜನಿಕ ಸ್ಥಳಗಳಲ್ಲಿ ಜನರಿಂದ 6 ಅಡಿ ಅಂತರ ಕಾಪಾಡಿ.

ಸಾಧ್ಯವಾದಷ್ಟು ಮನೆಯಲ್ಲೇ ಇರೋಕೆ ಪ್ರಯತ್ನ ಮಾಡಿ

ಈ ಕೆಲಸಗಳನ್ನ ಮಾಡಲೇಬೇಡಿ :

ಸಾಧ್ಯವಾದಷ್ಟು ಮುಖವನ್ನ ಅದರಲ್ಲೂ ವಿಶೇಷವಾಗಿ ಕಣ್ಣು, ಮೂಗು ಹಾಗೂ ಬಾಯಿಯನ್ನ ಮುಟ್ಟಲೇಬೇಡಿ

ಜನದಟ್ಟಣೆ ಇರುವ ಸ್ಥಳಗಳಲ್ಲಿ ಇರಲೇಬೇಡಿ

ಯಾವುದೇ ವ್ಯಕ್ತಿಯನ್ನ ಹತ್ತಿರದಿಂದ ಸಂಪರ್ಕ ಮಾಡಬೇಡಿ

ಮಾಲ್​, ಜಿಮ್​ ಹಾಗೂ ಪಬ್​ನಂತಹ ಸ್ಥಳಗಳಿಗೆ ಹೋಗಬೇಡಿ.

ಈ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಷ್ಟವಾದ್ದರಿಂದ ಇಂತಹ ಸ್ಥಳಗಳಿಗೆ ಭೇಟಿ ನೀಡಲೇಬೇಡಿ, ಆದಷ್ಟು ಪ್ರವಾಸಗಳನ್ನ ಕೈಗೊಳ್ಳಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...