
ಇನ್ನು ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ದನ್, ಕೊರೊನಾ ವೈರಸ್ ಮಾರ್ಗಸೂಚಿಗಳನ್ನ ನಿರ್ಲಕ್ಷ್ಯ ಮಾಡುತ್ತಿರೋದೇ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಸಾಮಾಜಿಕ ಅಂತರ ಮರೆತಿದ್ದು ಹಾಗೂ ಮಾಸ್ಕ್ಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರೋದೇ ಈ ಎಲ್ಲಾ ಅನಾಹುತಕ್ಕೆ ಕಾರಣ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ 2ನೇ ಅಲೆಯಿಂದ ನಿಮ್ಮನ್ನ ನೀವು ಬಚಾವ್ ಮಾಡಿಕೊಳ್ಳಬೇಕು ಅಂದರೆ ಏನು ಮಾಡಬೇಕು ಹಾಗೂ ಏನನ್ನ ಮಾಡಬಾರದು ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ :
ನಕಲಿ ಮದ್ಯ ಸೇವನೆ ಮಾಡಿದ್ದ ನಾಲ್ವರ ದಾರುಣ ಸಾವು
ವೈಯಕ್ತಿಕ ಸ್ವಚ್ಛತೆಯ ಕಡೆ ಹೆಚ್ಚಿನ ಗಮನ ನೀಡಿ. ಕೈಯಲ್ಲಿ ಕಡಿಮೆ ಅಂದರೂ 20 ಸೆಕೆಂಡ್ಗಳ ಕಾಲ ತಿಕ್ಕಿ ತೊಳೆಯಿರಿ.
ಮನೆಯಿಂದ ಹೊರಹೋಗುವ ಮುನ್ನ ಸ್ಯಾನಿಟೈಸರ್ ಬಳಕೆ ಮಾಡೋದನ್ನ ಮರೆಯದಿರಿ
ಮನೆಯಿಂದ ಹೊರ ಹೋಗುವ ಮುನ್ನ ಮಾಸ್ಕ್ ಧರಿಸಿ.
ಕೆಮ್ಮುವಾಗ ಹಾಗೂ ಸೀನುವಾಗ ಟಿಶ್ಯೂ ಪೇಪರ್ಗಳನ್ನ ಅಡ್ಡ ಹಿಡಿಯಿರಿ.
ಮನೆಯಿಂದ ಹೊರಗಡೆ ಇದ್ದ ವೇಳೆ ಕೆಮ್ಮುವಾಗ ಹಾಗೂ ಸೀನುವಾಗ ಮಾಸ್ಕ್ಗಳನ್ನ ತೆಗೆಯಬೇಡಿ.
ಸೀನುವ ವೇಳೆ ಬಳಕೆ ಮಾಡಿದ ಟಿಶ್ಯೂ ಕಾಗದಗಳನ್ನ ಕಸದ ಬುಟ್ಟಿಯಲ್ಲೇ ಹಾಕಿ.
ಪಿಪಿಇ ಕಿಟ್, ಫೇಸ್ ಮಾಸ್ಕ್ಗಳನ್ನ ವೈಜ್ಞಾನಿಕ ರೀತಿಯಲ್ಲಿ ಡಂಪ್ ಮಾಡಿ.
ಸಾರ್ವಜನಿಕ ಸ್ಥಳಗಳಲ್ಲಿ ಜನರಿಂದ 6 ಅಡಿ ಅಂತರ ಕಾಪಾಡಿ.
ಸಾಧ್ಯವಾದಷ್ಟು ಮನೆಯಲ್ಲೇ ಇರೋಕೆ ಪ್ರಯತ್ನ ಮಾಡಿ
ಈ ಕೆಲಸಗಳನ್ನ ಮಾಡಲೇಬೇಡಿ :
ಸಾಧ್ಯವಾದಷ್ಟು ಮುಖವನ್ನ ಅದರಲ್ಲೂ ವಿಶೇಷವಾಗಿ ಕಣ್ಣು, ಮೂಗು ಹಾಗೂ ಬಾಯಿಯನ್ನ ಮುಟ್ಟಲೇಬೇಡಿ
ಜನದಟ್ಟಣೆ ಇರುವ ಸ್ಥಳಗಳಲ್ಲಿ ಇರಲೇಬೇಡಿ
ಯಾವುದೇ ವ್ಯಕ್ತಿಯನ್ನ ಹತ್ತಿರದಿಂದ ಸಂಪರ್ಕ ಮಾಡಬೇಡಿ
ಮಾಲ್, ಜಿಮ್ ಹಾಗೂ ಪಬ್ನಂತಹ ಸ್ಥಳಗಳಿಗೆ ಹೋಗಬೇಡಿ.
ಈ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಷ್ಟವಾದ್ದರಿಂದ ಇಂತಹ ಸ್ಥಳಗಳಿಗೆ ಭೇಟಿ ನೀಡಲೇಬೇಡಿ, ಆದಷ್ಟು ಪ್ರವಾಸಗಳನ್ನ ಕೈಗೊಳ್ಳಬೇಡಿ.