
ನವದೆಹಲಿ: ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದರೂ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಪರೀಕ್ಷೆಗೆ ಒಳಪಟ್ಟ ಜನರಿಗೆ ಎಸ್ಎಂಎಸ್ ಮೂಲಕ ಕೊರೋನಾ ನೆಗೆಟಿವ್ ವರದಿ ಬಂದರೂ ಮಾಹಿತಿ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನ್ ಖಡಕ್ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದೆ.
ಈ ಮೊದಲು ಪಾಸಿಟಿವ್ ಬಂದರೆ ಮಾತ್ರ ಎಸ್ಎಂಎಸ್ ಬರುತ್ತಿತ್ತು. ನೆಗೆಟಿವ್ ವರದಿ ಬಂದರೆ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ದೂರುಗಳು ಕೇಳಿ ಬಂದಿದ್ದವು. ನೆಗೆಟಿವ್ ಬಂದರೂ ಮಾಹಿತಿ ನೀಡಬೇಕೆಂದು ಹಲವರು ದೂರು ನೀಡಿದ್ದು ಹೀಗಾಗಿ ನೆಗೆಟಿವ್ ವರದಿ ಬಂದರೂ ಎಸ್ಎಂಎಸ್ ಮೂಲಕ ಮಾಹಿತಿ ತಿಳಿಸುವಂತೆ ಸೂಚಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆನ್ನಲಾಗಿದೆ.