alex Certify ಚೆನ್ನೈ ಜನರನ್ನು ಬೆಚ್ಚಿಬೀಳಿಸಿದೆ ಈ ತರಕಾರಿ ಮಾರುಕಟ್ಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈ ಜನರನ್ನು ಬೆಚ್ಚಿಬೀಳಿಸಿದೆ ಈ ತರಕಾರಿ ಮಾರುಕಟ್ಟೆ

Coronavirus in Tamil Nadu: Over 2,700 COVID-19 cases linked to ...

ಚೀನಾದ ವುಹಾನ್ ನಗರದಲ್ಲಿರುವ ಕಾಡು ಪ್ರಾಣಿಗಳ ಮಾರಾಟ ಮಾರುಕಟ್ಟೆ ಮಾರಣಾಂತಿಕ ಕೊರೊನಾ ವೈರಸ್ ನ ಉಗಮಸ್ಥಾನ ಎಂದು ಹೇಳಲಾಗಿತ್ತು.

ಇದೀಗ ಭಾರತದ ಚೆನ್ನೈನಲ್ಲಿರುವ ಮಾರುಕಟ್ಟೆಯೊಂದು ಬರೋಬ್ಬರಿ 2760 ಮಂದಿಗೆ ಕೊರೊನಾ ಸೋಂಕು ಹರಡಲು ಕಾರಣವಾಗುವ ಮೂಲಕ ಚೆನ್ನೈ ಜನತೆಯನ್ನು ಬೆಚ್ಚಿಬೀಳಿಸಿದೆ.

ಹೌದು, ಚೆನ್ನೈನ ಕೊಯಂಬೇಡು ತರಕಾರಿ ಮಾರುಕಟ್ಟೆ, ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿದ್ದು, ಗಮನಾರ್ಹ ಸಂಗತಿಯೆಂದರೆ ತಮಿಳುನಾಡಿನಲ್ಲಿ ವರದಿಯಾಗಿರುವ ಪ್ರಕರಣಗಳ ಪೈಕಿ ಶೇಕಡಾ 35 ಪ್ರಕರಣಗಳಿಗೆ ಕೊಯಂಬೇಡು ತರಕಾರಿ ಮಾರುಕಟ್ಟೆ ಕಾರಣವಾಗಿದೆ.

295 ಎಕರೆ ವಿಸ್ತೀರ್ಣದಲ್ಲಿರುವ ಈ ಮಾರುಕಟ್ಟೆಯಲ್ಲಿ 3750 ಅಂಗಡಿಗಳಿದ್ದು, ಖರೀದಿಗಾಗಿ ಪ್ರತಿ ನಿತ್ಯ ಸಹಸ್ರಾರು ಮಂದಿ ಆಗಮಿಸುತ್ತಾರೆ. ಹೀಗೆ ಯಾರೋ ಒಬ್ಬರಿಂದ ಹರಡಿದ ಕೊರೊನಾ ಸೋಂಕು ಇದೀಗ ಬರೋಬ್ಬರಿ 2760 ಮಂದಿಗೆ ವ್ಯಾಪಿಸಿದ್ದು ಈಗ ಮಾರುಕಟ್ಟೆಯನ್ನು ಮುಚ್ಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...