alex Certify ನೀವೂ N-95 ಮಾಸ್ಕ್ ಬಳಸ್ತೀರಾ….? ಕೂಡಲೇ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ N-95 ಮಾಸ್ಕ್ ಬಳಸ್ತೀರಾ….? ಕೂಡಲೇ ಓದಿ ಈ ಸುದ್ದಿ

ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎನ್-95 ಮಾಸ್ಕ್ ಧರಿಸುವುದರ ವಿರುದ್ಧ ಎಚ್ಚರಿಕೆ ಪತ್ರವನ್ನು ಬರೆದಿದೆ, ಇದು ವೈರಸ್ ಹರಡುವುದನ್ನು ತಡೆಯುವುದಿಲ್ಲ. ರಂಧ್ರ ಉಸಿರಾಟಕಾರಕಗಳನ್ನು ಅಳವಡಿಸಿರುವ ಎನ್-95, ಕೋವಿಡ್ 19 ರೋಗ ಹರಡುವುದನ್ನು ತಡೆಯುವುದಿಲ್ಲ. ಈ ಬಗ್ಗೆ ಜನರಿಗೆ ಎಚ್ಚರಿಗೆ ನೀಡಬೇಕೆಂದು ಕೇಂದ್ರ, ಪತ್ರದಲ್ಲಿ ಹೇಳಿದೆ.

ಈ ಮಾಸ್ಕ್ ಬಳಕೆ ಕೊರೊನಾ ವಿರುದ್ಧ ತೆಗೆದುಕೊಂಡ ಕ್ರಮಕ್ಕೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾಜೀವ್ ಗರ್ಗ್ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ, ಆರೋಗ್ಯ ಕಾರ್ಯಕರ್ತರ ಬದಲು ಜನರು ಎನ್ -95 ಮಾಸ್ಕನ್ನು ಅನುಚಿತವಾಗಿ ಬಳಸುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ವಿಶೇಷವಾಗಿ ರಂಧ್ರ ಉಸಿರಾಟಕಾರಕಗಳನ್ನು ಅಳವಡಿಸಿರುವ ಎನ್ -95 ಮಾಸ್ಕ್ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಿಗೆ ವಿರುದ್ಧವಾಗಿದೆ. ಏಕೆಂದರೆ ಈ ಮಾಸ್ಕ್ ನಿಂದ  ವೈರಸ್ ಹೊರಬರುವುದನ್ನು ತಡೆಯಲು ಸಾಧ್ಯವಿಲ್ಲವೆಂದಿದ್ದಾರೆ. ಜನರು ಎನ್ -95 ಮಾಸ್ಕನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರದ ಈ ಎಚ್ಚರಿಕೆ ಮಹತ್ವದ್ದಾಗಿದೆ. ಸರ್ಕಾರದ ಆದೇಶದ ನಂತ್ರ ರಂಧ್ರಗಳಿಲ್ಲದೆ ಮಾಸ್ಕ್‌ ಗಳ ಬಳಕೆ ಹೆಚ್ಚಾಗುವ ಸಾಧ್ಯತೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...