
ಕೋವಿಡ್ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಭಾರತೀಯ ರೈಲ್ವೇ ಸಹ ಈ ಸೋಂಕಿಗೆ ತನ್ನ ಸಿಬ್ಬಂದಿಯನ್ನು ಕಳೆದುಕೊಂಡಿದೆ.
ಇದುವರೆಗೂ ಈ ಸಾಂಕ್ರಮಿಕದ ಕಾರಣಕ್ಕೆ ಇಲಾಖೆಯ 1,952 ಉದ್ಯೋಗಿಗಳು ನಿಧನರಾಗಿದ್ದು, ಪ್ರತಿನಿತ್ಯ 1000 ಉದ್ಯೋಗಿಗಳಿಗೆ ಸೋಂಕು ತಗುಲುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 13 ಲಕ್ಷ+ ಉದ್ಯೋಗಿಗಳನ್ನು ಹೊಂದಿರುವ ರೈಲ್ವೇ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆಗಳಲ್ಲಿ ಒಂದಾಗಿದೆ.
ಮದ್ಯದಂಗಡಿ ಮುಂದೆ ನಿಲ್ಲಬೇಕಾಗಿಲ್ಲ ಕ್ಯೂ….! ಮನೆಗೆ ಬರಲಿದೆ ಆಲ್ಕೋಹಾಲ್
“ರೈಲ್ವೇ ಆಸ್ಪತ್ರೆಗಳಲ್ಲಿ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಹಾಸಿಗೆಗಳ ಸಂಖ್ಯೆಯನ್ನು ವರ್ಧಿಸಲಾಗಿದೆ. ಇಲ್ಲಿವರೆಗೂ ನಮ್ಮ ಆಸ್ಪತ್ರೆಗಳ 4000 ಹಾಸಿಗೆಗಳನ್ನು ನಮ್ಮ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಬಳಸಿಕೊಂಡಿದ್ದಾರೆ” ಎಂದು ರೈಲ್ವೇ ಮಂಡಳಿ ಚೇರ್ಮನ್ ಸುನೀತ್ ಶರ್ಮಾ ತಿಳಿಸಿದ್ದಾರೆ.
ಕೋವಿಡ್ ಸಂಕಷ್ಟದ ವಿರುದ್ಧ ಹೋರಾಡುತ್ತಿರುವ ಇತರೆ ಕ್ಷೇತ್ರಗಳ ಮುಂಚೂಣಿ ಕಾರ್ಯಕರ್ತರಿಗೆ ಕೊಡುವ ರೀತಿಯ ಪರಿಹಾರವನ್ನೇ ತಮ್ಮ ಇಲಾಖೆಯ ಸಹೋದ್ಯೋಗಿಗಳೂ ಕೊಡಬೇಕೆಂಬ ಮನವಿಯೊಂದನ್ನು ಅಖಿಲ ಭಾರತ ರೈಲ್ವೇ ಸಿಬ್ಬಂದಿಯ ಸಂಘವು ರೈಲ್ವೇ ಸಚಿವ ಪಿಯುಶ್ ಗೋಯೆಲ್ ಅವರಿಗೆ ಸಲ್ಲಿಸಿದೆ.