alex Certify ಗಮನಿಸಿ: ʼಸ್ಪುಟ್ನಿಕ್ ವಿʼ ಲಸಿಕೆ ಪಡೆಯಲು ಬಯಸಿದ್ದ ಜನರಿಗೆ ಇಲ್ಲಿದೆ ಮಹತ್ವದ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ʼಸ್ಪುಟ್ನಿಕ್ ವಿʼ ಲಸಿಕೆ ಪಡೆಯಲು ಬಯಸಿದ್ದ ಜನರಿಗೆ ಇಲ್ಲಿದೆ ಮಹತ್ವದ ಸುದ್ದಿ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಮಧ್ಯೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮತ್ತೊಂದು ಲಸಿಕೆ ಈಗಾಗಲೇ ಭಾರತಕ್ಕೆ ಬಂದಿದೆ. ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಈಗ ಕೋವಿನ್ ಅಪ್ಲಿಕೇಶನ್‌ನಲ್ಲಿ ಬುಕಿಂಗ್ ಗೆ ಲಭ್ಯವಾಗಿದೆ. ಇದಕ್ಕಿಂತ ಮೊದಲು 18 ವರ್ಷ ಮೇಲ್ಪಟ್ಟ ಜನರಿಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ನೀಡಲಾಗ್ತಿತ್ತು.

ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್-ವಿ ಲಸಿಕೆಗಾಗಿ ಅಪೊಲೊ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್ ನ ಅಪೊಲೊ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟ ಜನರಿಗೆ ಸ್ಪುಟ್ನಿಕ್ ವಿ ಲಸಿಕೆ ನೀಡಲಾಗುತ್ತಿದೆ. ಇದಲ್ಲದೆ ವಿಶಾಖಪಟ್ಟಣಂ, ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಚೆನ್ನೈ, ಕೋಲ್ಕತಾ ಮತ್ತು ಪುಣೆಯಲ್ಲಿಯೂ ಲಸಿಕೆ ನೀಡಲಾಗ್ತಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ, ಅಪೊಲೊ ಆಸ್ಪತ್ರೆಯಲ್ಲಿ 1250 ರೂಪಾಯಿಗೆ ಲಭ್ಯವಿದೆ. ಇದರಲ್ಲಿ ಆಸ್ಪತ್ರೆ ವೆಚ್ಚವೂ ಸೇರಿದೆ.  ಡಾ. ರೆಡ್ಡಿ ಪ್ರಯೋಗಾಲಯ ಹಿಂದೆ ಸ್ಪುಟ್ನಿಕ್ ವಿ ಲಸಿಕೆ ಬೆಲೆಯನ್ನು 948 ರೂಪಾಯಿಗೆ ನಿಗದಿಪಡಿಸಿತ್ತು. ಇದ್ರಲ್ಲಿ ಶೇಕಡಾ 5 ರಷ್ಟು ಜಿಎಸ್ಟಿ ಸೇರಿತ್ತು. ಈಗ ಆಸ್ಪತ್ರೆಯ ವೆಚ್ಚವನ್ನು ಸೇರಿಸಿ, ಲಸಿಕೆಯ ಬೆಲೆಯನ್ನು 1250 ರೂಪಾಯಿಗೆ ನಿಗದಿಪಡಿಸಲಾಗಿದೆ.

ರಷ್ಯಾದಲ್ಲಿ ತಯಾರಿಸಿದ ಸ್ಪುಟ್ನಿಕ್-ವಿ ಯ ಮೊದಲ ಸರಕು ಸುಮಾರು ಒಂದುವರೆ ಮಿಲಿಯನ್ ಡೋಸ್ ಮೇ 1 ರಂದು ಭಾರತವನ್ನು ತಲುಪಿತ್ತು. ಕಳೆದ ವಾರ ಲಸಿಕೆ ದರವನ್ನು ಬಹಿರಂಗಪಡಿಸಿದ ಡಾ. ರೆಡ್ಡಿಸ್ ಲ್ಯಾಬ್ ಈ ಲಸಿಕೆಗೆ ಒಪ್ಪಿಗೆ ಸಿಕ್ಕಿದೆ ಎಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...