alex Certify ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾನೆ ಈ ಬಡ ಕೂಲಿ ಕಾರ್ಮಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾನೆ ಈ ಬಡ ಕೂಲಿ ಕಾರ್ಮಿಕ

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಜನರು ತಮ್ಮಿಂದಾದ ಸಹಾಯ ಮಾಡಿದ್ದಾರೆ. ಕೆಲವರು ಪ್ರತಿನಿತ್ಯ ಊಟ ವಿತರಿಸಿದರೆ ಮತ್ತೆ ಕೆಲವರು ಔಷಧಿ, ದಿನಸಿಗಳನ್ನು ವಿತರಿಸಿದ್ದಾರೆ. ಇನ್ನು ಕೆಲವರು ವಾಹನಗಳ ಮೂಲಕ ವಲಸೆ ಕಾರ್ಮಿಕರನ್ನು ಮನೆಗೆ ಕಳಿಸಿದ್ದಾರೆ.

ಆದರೆ ತನ್ನಿಂದ ಈ ರೀತಿಯ ಸೇವೆ ಕಷ್ಟವೆಂದು ಸುಮ್ಮನೆ ಕೂರದ ಕೂಲಿ ಕಾರ್ಮಿಕನೊಬ್ಬ ವಲಸೆ ಕಾರ್ಮಿಕರ ಲಗ್ಗೇಜ್ ಗಳನ್ನು ಉಚಿತವಾಗಿ ಸಾಗಿಸಿ ನೆರವಾಗಿದ್ದಾರೆ.

ಲಕ್ನೋ ರೈಲ್ವೆ ನಿಲ್ದಾಣದಲ್ಲಿರುವ 80 ವರ್ಷದ ಕೂಲಿ ರೆಹಮಾನ್ ಈ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದ್ದು, ಈಗ ಸನ್ಮಾನಕ್ಕೆ ಒಳಗಾಗಿದ್ದಾರೆ.

ತಮ್ಮ ಸಹೋದ್ಯೋಗಿಗಳಿಂದ ಸೂಫಿ ಸೇಟ್ ಎಂದು ಕರೆಸಿಕೊಳ್ಳುವ ರೆಹಮಾನ್ ರೈಲ್ವೆ ನಿಲ್ದಾಣಕ್ಕೆ ಬರುತ್ತಿರುವ ವಲಸೆ ಕಾರ್ಮಿಕರ ಲಗೇಜ್ ಹೊತ್ತಿದ್ದಕ್ಕೆ ಯಾವುದೇ ಹಣವನ್ನು ಪಡೆಯುತ್ತಿಲ್ಲ.

ಇನ್ನೊಂದು ವಿಶೇಷವೆಂದರೆ ಈ ಕೆಲಸಕ್ಕಾಗಿ ಅವರು ಪ್ರತಿನಿತ್ಯ ತಮ್ಮ ಮನೆಯಿಂದ ಆರು ಕಿಲೋಮೀಟರ್ ನಡೆದೇ ಬರುತ್ತಿದ್ದಾರೆ. ರೈಲ್ವೆ ನಿಲ್ದಾಣವನ್ನು ತಮ್ಮ‌ ಎರಡನೇ ಮನೆ ಎಂದು ಭಾವಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...