ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. ಅವ್ರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಡಾ. ಟ್ರೆಹನ್, ನಾನು ನಿಮಗೆ ಒಂದು ವಿಶೇಷ ಸಂದೇಶವನ್ನು ನೀಡಲಿದ್ದೇನೆ ಎಂದು ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಚೀನಾ, ಇಟಲಿ ಮತ್ತು ಡಬ್ಲ್ಯುಎಚ್‌ಒಗಳಿಂದ ನಾನು ವೈಯಕ್ತಿಕ ಮಾಹಿತಿ ಸ್ವೀಕರಿಸಿದ್ದೇನೆ. 23 ರಿಂದ ಅಪಾಯಕಾರಿ ಸಮಯ ಪ್ರಾರಂಭವಾಗಿದೆ. ಮೊದಲ ನಾಲ್ಕು ದಿನಗಳು ಮತ್ತು ನಂತರ ನಾಲ್ಕು ದಿನಗಳನ್ನು ಲೆಕ್ಕ ಹಾಕಬೇಕು. ಈ ಎಂಟು ದಿನಗಳಲ್ಲಿ ಕೊರೊನಾ ವೈರಸ್ ಗಂಟಲಿನಿಂದ ಎದೆಯವರೆಗೆ ತಲುಪುತ್ತದೆ. ಶನಿವಾರ ಒಂಬತ್ತನೇ ದಿನ ಪ್ರಾರಂಭವಾಗಲಿದ್ದು, ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕಾಳಜಿ ವಹಿಸುವುದು ಅತ್ಯಗತ್ಯವೆಂದು ಅವರು ಹೇಳಿದ್ದಾರೆ. ಅನವಶ್ಯಕ ಓಡಾಟ ಬೇಡವೆಂದು ಅವರು ಹೇಳಿದ್ದಾರೆ. ಮನೆ ಸಾಮಗ್ರಿಗಳನ್ನು ತರುವಾಗ ಎಚ್ಚರವಿರಲಿ ಎಂದವರು ಹೇಳಿದ್ದಾರೆ. ಮಾಸ್ಕ್ ಕಡ್ಡಾಯವಾಗಿರಲಿ. ಕೈಗಳಿಗೆ ಗ್ಲೌಸ್ ಬಳಸಿ ಎಂದಿದ್ದಾರೆ. ಮನೆಯಲ್ಲಿ ಮಕ್ಕಳು ಅಥವಾ ಹಿರಿಯ ನಾಗರಿಕರಿದ್ದರೆ ಅಪಾಯ ಹೆಚ್ಚು. ಕೊರೊನಾ ವೈರಸ್ ಸೋಂಕಿತ ಆರು ಅಡಿ ದೂರದಲ್ಲಿದ್ದರೂ ಈಗ ಸೋಂಕು ಹರಡುತ್ತದೆ ಎಂದವರು ಹೇಳಿದ್ದಾರೆ.
ಇಟಲಿಯಲ್ಲಿ ಏನಾಯಿತು ಎಂದು ಅವರು ವಿವರಿಸಿದ್ದಾರೆ. ಮೊದಲ 15 ದಿನಗಳು ಅಲ್ಲಿ ಒಂದು ಅಥವಾ ಎರಡು ಪ್ರಕರಣಗಳು ಬಂದಿದ್ದವು. ಆದರೆ ಒಂಬತ್ತನೇ ದಿನದಿಂದ ಪ್ರಕರಣಗಳು ಹೆಚ್ಚಾದವು. ನಂತರ ಸಾವಿರಾರು ಜನರು ಸೋಂಕಿಗೆ ಒಳಗಾದರು. ಹಾಗಾಗಿ ನಾವು ಎಚ್ಚರಿಕೆಯಿಂದಿರಬೇಕೆಂದು ಅವರು ಹೇಳಿದ್ದಾರೆ.
ನೆರೆಹೊರೆಯವರ ಭೇಟಿಯನ್ನು ನಿರಾಕರಿಸಿ. ಏಪ್ರಿಲ್ 14 ರ ನಂತರ ಎಲ್ಲವೂ ಸರಿಯಾಗಿರುತ್ತದೆ. ಎಲ್ಲರ ಆರೋಗ್ಯ ಬಹಳ ಮುಖ್ಯವೆಂದು ಅವರು ಹೇಳಿದ್ದಾರೆ. ನಿಮಗೆ ಸೋಂಕು ಇದ್ದಲ್ಲಿ ಅದಕ್ಕೆ ಉತ್ತಮ ಚಿಕಿತ್ಸೆ ಪಡೆಯಿರಿ. ಮನೆಯ ತಿಂಡಿ ಸೇವನೆ ಮಾಡಿ. ಬಿಸಿ ನೀರು ಸೇವಿಸಿ. ಫ್ರಿಜ್ ಆಹಾರ ಸೇವನೆ ಮಾಡಬೇಡಿ. ಒಂದು ಹೊತ್ತಿಗೆ ಅಗತ್ಯವಿರುವ ಆಹಾರವನ್ನು ಮಾತ್ರ ತಯಾರಿಸಿಕೊಳ್ಳಿ ಎಂದವರು ಸಲಹೆ ನೀಡಿದ್ದಾರೆ.