ಸುಗಂಧ ದ್ರವ್ಯಗಳಲ್ಲಿ ಬಳಕೆಯಾಗುವ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ ತಿಮಿಂಗಲದ ವಾಂತಿಯನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುನಾಗಢ್ನಿಂದ ತಿಮಿಂಗಲದ ವಾಂತಿಯನ್ನ ಅಹಮದಾಬಾದ್ನಲ್ಲಿರುವ ಕ್ಲೈಂಟ್ಗೆ ರವಾನಿಸಲು ತೆರಳುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಬಳಿಯಿಂದ ಪೊಲೀಸರು ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ 5.35 ಕೆಜಿ ತಿಮಿಂಗಲದ ವಾಂತಿಯನ್ನ ವಶಪಡಿಸಿಕೊಂಡಿದ್ದಾರೆ.
ನಾವು ಮೂವರು ಆರೋಪಿಗಳನ್ನ ಬಂಧಿಸಿದ್ದು ಅವರಿಂದ 5.35 ಕೆಜಿ ತೂಕದ ತಿಮಿಂಗಲದ ವಾಂತಿಯನ್ನ ವಶಕ್ಕೆ ಪಡೆದಿದ್ದೇವೆ. ಈ ಅಕ್ರಮದಲ್ಲಿ 10 ಮಂದಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ತನಿಖೆಯನ್ನ ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಪ್ರೇಮ್ಸುಖ್ ದೇಲು ಹೇಳಿದ್ರು.
ಬಂಧಿತ ಆರೋಪಿಗಳನ್ನ ಜುನಾಗಢದ ಶರಿನ್ ಚೆಡಾ, ಭವನಗರ್ನ ಖಾಲಿದ್ ಓಫಿ ಹಾಗೂ ಉದಯ್ಪುರ್ನ ಸುಮರ್ ಸೋನಿ ಎಂದು ಗುರುತಿಸಲಾಗಿದೆ.