ಚುನಾವಣೆಗೆ ತಿಂಗಳುಗಳ ಮೊದಲು ಕಾಂಗ್ರೆಸ್ ಸರ್ಕಾರವು ಪುದುಚೇರಿಯಲ್ಲಿ ಬಹುಮತ ಕಳೆದುಕೊಳ್ತಿದೆ. ಕಳೆದ ಎರಡು ದಿನಗಳಲ್ಲಿ ಇಬ್ಬರು ಶಾಸಕರು ಸೇರಿದಂತೆ ಒಟ್ಟು ನಾಲ್ವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ 30 ಶಾಸಕರ ಸ್ಥಾನದಲ್ಲಿ ಕಾಂಗ್ರೆಸ್ 15 ಕಡೆ ಗೆಲುವನ್ನ ಕಂಡಿತ್ತು. ಡಿಎಂಕೆಯ ಇಬ್ಬರು ಸದಸ್ಯರ ಬೆಂಬಲ ಬಳಿಕ ಕಾಂಗ್ರೆಸ್ ಬಹುಮತವನ್ನ ಪಡೆದಿದೆ.
ಆದರೆ ಇದೀಗ ನಾಲ್ವರು ಶಾಸಕರ ರಾಜೀನಾಮೆ ಬಳಿಕ ಕಾಂಗ್ರೆಸ್ನ ಸಂಖ್ಯಾಬಲ 11 ಆಗಿದ್ದು ಇದರಿಂದಾಗಿ ವಿ. ನಾರಾಯಣಸ್ವಾಮಿ ಸರ್ಕಾರಕ್ಕೆ ಬಹುಮತದ ಕೊರತೆ ಉಂಟಾಗಿದೆ.
ಚುನಾವಣಾ ಕಾರ್ಯತಂತ್ರವನ್ನ ರೂಪಿಸಲು ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುದುಚೇರಿಗೆ ಆಗಮಿಸೋಕೂ ಮುನ್ನವೇ ಪುದುಚೇರಿ ರಾಜಕೀಯದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.
ಕಳೆದ ಕೆಲ ವಾರಗಳಿಂದ ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಎ. ನಮಸಿವಯಂ ಹಾಗೂ ಇ. ಥಿಪೈಂಜನ್ ಜನವರಿ25ರಂದು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಒಬ್ಬರು ಸೋಮವಾರ ಹಾಗೂ ಇನ್ನೊಬ್ಬ ಶಾಸಕ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.