alex Certify ಕೊರೊನಾ ಲಸಿಕೆ ಹಂಚಿಕೆ ಅಭಿಯಾನ ಶುರುವಾಗ್ತಿದ್ದಂತೆ ಟ್ವಿಟರ್​ನಲ್ಲಿ ಶುಭಾಶಯಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಂಚಿಕೆ ಅಭಿಯಾನ ಶುರುವಾಗ್ತಿದ್ದಂತೆ ಟ್ವಿಟರ್​ನಲ್ಲಿ ಶುಭಾಶಯಗಳ ಸುರಿಮಳೆ

ಕೊರೊನಾ ವೈರಸ್​ನಿಂದಾಗಿ ತತ್ತರಿಸಿದ್ದ ಭಾರತ ಐತಿಹಾಸಿಕ ದಿನವಾದ ಇಂದು ಲಸಿಕೆ ವಿತರಣೆಯನ್ನ ಆರಂಭಿಸುವ ಮೂಲಕ ಮಾರಕ ವೈರಸ್​ ವಿರುದ್ಧ ಮತ್ತೊಂದು ರೀತಿಯ ಹೋರಾಟಕ್ಕೆ ಇಳಿದಿದೆ. ದೆಹಲಿ ಏಮ್ಸ್​ನ ಪೌರ ಕಾರ್ಮಿಕ ಮನೀಶ್​ ಕುಮಾರ್​ಗೆ ದೇಶದಲ್ಲೇ ಮೊದಲ ಕೊರೊನಾ ಲಸಿಕೆಯನ್ನ ನೀಡಲಾಯ್ತು.

ಮನೀಶ್​ ಕುಮಾರ್​ಗೆ ಕೊರೊನಾ ಲಸಿಕೆ ನೀಡುತ್ತಿದ್ದ ವೇಳೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಉಪಸ್ಥಿತರಿದ್ದರು. ಏಮ್ಸ್ ನಿರ್ದೇಶಕ ಡಾ. ರಂದೀಪ್​ ಗುಲೇರಿಯಾ ಕೂಡ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ.

ಕೊರೊನಾ ಲಸಿಕೆ ಹಂಚಿಕೆ ಸಂಬಂಧ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಕೊರೊನಾ ಲಸಿಕೆ ಅಭಿಯಾನದ ಮೂಲಕ ಕೋವಿಡ್​ 19ನ್ನು ಸೋಲಿಸೋಣ ಎಂದು ಕರೆ ನೀಡಿದ್ದಾರೆ.

ಖ್ಯಾತ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​​ ಮರಳು ಶಿಲ್ಪಕಲೆ ಮೂಲಕ ಕೊರೊನಾ ಲಸಿಕೆ ಡ್ರೈವ್​ಗೆ ಶುಭಕೋರಿದ್ದು ಈ ಕಲಾಕೃತಿಯ ಫೋಟೋ ಟ್ವಿಟರ್​ನಲ್ಲಿ ಸಖತ್​ ವೈರಲ್​ ಆಗಿದೆ.

ಕೋವಿಡ್​ 19 ವಿರುದ್ಧ ಭಾರತ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಿಸಿದೆ. ಇದು ಈಗಾಗಲೇ ಲಕ್ಷಾಂತರ ಜೀವಗಳನ್ನ ಬಲಿ ಪಡೆದಿದೆ. ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಹಾಗೂ ಭಾರತ್​ ಬಯೋಟೆಕ್​ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​​ ಎಂಬ ಎರಡು ಲಸಿಕೆಗಳಿಗೆ ಪ್ರಧಾನಿ ಮೋದಿ ಸರ್ಕಾರ ತುರ್ತು ಅನುಮೋದನೆ ನೀಡಿದೆ. ಕೊರೊನಾ ಲಸಿಕೆಯ ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...