alex Certify ಪ್ರತಿಭಟನೆ ಬೇಡ, ಚರ್ಚೆಗೆ ಮುಂದಾಗಿ ಎಂದು ರೈತರಲ್ಲಿ ಅಮಿತ್​ ಶಾ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನೆ ಬೇಡ, ಚರ್ಚೆಗೆ ಮುಂದಾಗಿ ಎಂದು ರೈತರಲ್ಲಿ ಅಮಿತ್​ ಶಾ ಮನವಿ

ನೂತನ ಕೃಷಿ ಮಸೂದೆ ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಯಲ್ಲಿ  ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.

ರೈತರೊಂದಿಗಿನ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರೈತರೊಂದಿಗೆ ಮಾತುಕತೆಗೆ ನಡೆಸಲು ಒತ್ತು ನೀಡಿದ್ದು, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುವಂತೆ ಶನಿವಾರ ಕರೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಕೆಲ ಸುಧಾರಣೆಗಳನ್ನ ತರಲಿಕ್ಕೋಸ್ಕರ ಈ ಮಸೂದೆಯನ್ನ ಜಾರಿಗೆ ತಂದಿದೆ. ಆದರೆ ಕೆಲ ರೈತರು ಈ ಮಸೂದೆಯ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಮಸೂದೆಯನ್ನ ವಿರೋಧಿಸುತ್ತಿರುವ ರೈತರು ಸರ್ಕಾರದೊಂದಿಗೆ ಚರ್ಚೆ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ ಅಂತಾ ಆಸ್ಸಾಂನ ಕಮ್ರೂಪ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಗುರುವಾರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್​ ಅಗರ್​ವಾಲ್​ ಪ್ರತಿಭಟನಾ ನಿರತ ಸಂಘಗಳಿಗೆ ಪತ್ರ ಬರೆದು ಮಾತುಕತೆಗೆ ಆಹ್ವಾನಿಸಿದ್ದರು. ಇದೀಗ ಅಮಿತ್​ ಶಾ ಕೂಡ ರೈತರಿಗೆ ಚರ್ಚೆಗೆ ಆಗಮಿಸುವಂತೆ ಕರೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...