
ಕೋವಿಡ್ 19 ಆರಂಭವಾದ ಬಳಿಕ ಅದನ್ನು ಹತ್ತಿಕ್ಕಲು ವಿವಿಧ ತಂತ್ರಜ್ಞಾನ ಆಧಾರಿತ ಉಪಕರಣಗಳು ಮಾರುಕಟ್ಟೆಗೆ ಬಂದಿದೆ.
ಇದೀಗ ಕೊಯಮತ್ತೂರು ಮೂಲದ ಟೆಕ್ಸ್ ಟೈಲ್ ಕಂಪನಿ ಶಿವ ಟೆಕ್ಸಿಯಾರ್ನ್ ಲಿಮಿಟೆಡ್ ಶೀಘ್ರದಲ್ಲೇ ಆಂಟಿ-ವೈರಲ್ ಫ್ಯಾಬ್ರಿಕ್ ನಿಂದ ಮಾಡಿದ ಫೇಸ್ ಮಾಸ್ಕ್ ಗಳನ್ನು ಬಿಡುಗಡೆ ಮಾಡಲಿದೆ.
ಇದರ ವಿಶೇಷತೆ ಏನಪ್ಪಾ ಅಂದರೆ, ಆಂಟಿ-ವೈರಲ್ ಫ್ಯಾಬ್ರಿಕ್ ಸಂಪರ್ಕಕ್ಕೆ ಬರುವ ವೈರಸ್ 30 ಸೆಕೆಂಡುಗಳಿಂದ 2 ನಿಮಿಷಗಳಲ್ಲಿ ನಿಷ್ಕ್ರಿಯಗೊಳ್ಳುತ್ತದೆ. ಫೇಸ್ ಮಾಸ್ಕ್ ಜನರಿಗೆ ತುಂಬಾ ಅನುಕೂಲಕರವಾಗಲಿದೆ. ಹೀಗೆಂದು ಎಸ್. ಶಿವ ಟೆಕ್ಸಿಯಾರ್ನ್‌ನ ವ್ಯವಸ್ಥಾಪಕ ನಿರ್ದೇಶಕ ಸುಂದರರಾಮನ್ ವಿವರಣೆ ನೀಡಿದ್ದಾರೆ. ಈ ಫೇಸ್ ಮಾಸ್ಕ್ ಹತ್ತು ಬಾರಿ ವಾಶ್ ಮಾಡಿ ಪುನರ್ಬಳಕೆ ಮಾಡಬಹುದೆಂದು ಸುಂದರರಾಮನ್ ಹೇಳಿದ್ದಾರೆ.