ಕೊರೊನಾ ವೈರಸ್ ಹರಡುವಿಕೆಯನ್ನ ನಿಯಂತ್ರಣ ಮಾಡಬೇಕು ಅಂತಾ ದೇಶದ ವಿವಿಧ ರಾಜ್ಯಗಳು ಸೂಕ್ತ ಕ್ರಮವನ್ನ ಕೈಗೊಂಡಿವೆ. ಅನೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಆದೇಶ ಜಾರಿಯಲ್ಲಿದೆ. ಸರ್ಕಾರದ ಆದೇಶವನ್ನ ಉಲ್ಲಂಘಿಸಿದ್ರೆ ಪೊಲೀಸರು ಸೂಕ್ತ ಶಿಕ್ಷೆಯನ್ನೂ ನೀಡ್ತಾರೆ. ಆದರೆ ತಮಿಳುನಾಡಿನಲ್ಲಿ ರಾತ್ರಿ 11 ಗಂಟೆಯವರೆಗೆ ಹೋಟೆಲ್ ಹಾಗೂ ರೆಸ್ಟಾರೆಂಟ್ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ರಾತ್ರಿ 10.21ರ ಸುಮಾರಿಗೇ ಹೋಟೆಲ್ಗೆ ನುಗ್ಗಿದ ಪೊಲೀಸ್ ಪೇದೆ ಹೋಟೆಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.
ಮುತ್ತು ಎಂಬ ಹೆಸರಿನ ಪೊಲೀಸ್ ಪೇದೆ ರಾತ್ರಿ 10.21ರ ಸುಮಾರಿಗೆ ಶ್ರೀ ರಾಜ ಹೋಟೆಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಪೊಲೀಸ್ ಎಂಟ್ರಿ ಕೊಡುವ ಹೊತ್ತಿಗೆ ಹೋಟೆಲ್ನ ಶಟರ್ ಅರ್ಧ ತೆರೆದಿತ್ತು. ಹೋಟೆಲ್ನ ಒಳಗಡೆ ಸ್ವಲ್ಪ ಮಂದಿ ಗ್ರಾಹಕರೂ ಸಹ ಇದ್ದರು. ಪೊಲೀಸ್ ಬರ್ತಿದ್ದಂತೆ ಗ್ರಾಹಕರು ಹೊರಗೆ ಹೋಗಿದ್ದಾರೆ. ಪೊಲೀಸ್, ಮಹಿಳೆ ಸೇರಿದಂತೆ ಹೋಟೆಲ್ನ ಸಿಬ್ಬಂದಿಗೆ ಲಾಠಿ ಬೀಸಿದ್ದು ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಮಹಿಳೆ ಸೇರಿದಂತೆ ಐವರಿಗೆ ಈ ಘಟನೆಯಿಂದ ಗಾಯಗಳಾಗಿದೆ. ಈ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೊನಾ ನಿಯಂತ್ರಣಕ್ಕಾಗಿ ತಮಿಳುನಾಡು ಸರ್ಕಾರ ರೆಸ್ಟಾರೆಂಟ್, ಫುಡ್ ಕೋರ್ಟ್ಸ್, ಚಹ ಅಂಗಡಿಗಳನ್ನ ರಾತ್ರಿ 11 ಗಂಟೆಗೆ ಬಂದ್ ಮಾಡುವಂತೆ ಆದೇಶ ನೀಡಿದೆ.
ಈ ಸಂಬಂಧ ಹೋಟೆಲ್ ಮಾಲೀಕ ಬಿ. ಮೋಹನರ್ ಕೊಯಂಬತ್ತೂರು ನಗರ ಕಮಿಷನರ್ಗೆ ದೂರನ್ನ ನೀಡಿದ್ದಾರೆ.