alex Certify ಹೋಟೆಲ್​ ಸಿಬ್ಬಂದಿ ಮೇಲೆ ಪೊಲೀಸ್​ ಕಾನ್​ಸ್ಟೇಬಲ್​ ದರ್ಪ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್​ ಸಿಬ್ಬಂದಿ ಮೇಲೆ ಪೊಲೀಸ್​ ಕಾನ್​ಸ್ಟೇಬಲ್​ ದರ್ಪ: ವಿಡಿಯೋ ವೈರಲ್​

ಕೊರೊನಾ ವೈರಸ್​ ಹರಡುವಿಕೆಯನ್ನ ನಿಯಂತ್ರಣ ಮಾಡಬೇಕು ಅಂತಾ ದೇಶದ ವಿವಿಧ ರಾಜ್ಯಗಳು ಸೂಕ್ತ ಕ್ರಮವನ್ನ ಕೈಗೊಂಡಿವೆ. ಅನೇಕ ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಆದೇಶ ಜಾರಿಯಲ್ಲಿದೆ. ಸರ್ಕಾರದ ಆದೇಶವನ್ನ ಉಲ್ಲಂಘಿಸಿದ್ರೆ ಪೊಲೀಸರು ಸೂಕ್ತ ಶಿಕ್ಷೆಯನ್ನೂ ನೀಡ್ತಾರೆ. ಆದರೆ ತಮಿಳುನಾಡಿನಲ್ಲಿ ರಾತ್ರಿ 11 ಗಂಟೆಯವರೆಗೆ ಹೋಟೆಲ್​ ಹಾಗೂ ರೆಸ್ಟಾರೆಂಟ್​​ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ರಾತ್ರಿ 10.21ರ ಸುಮಾರಿಗೇ ಹೋಟೆಲ್​​ಗೆ ನುಗ್ಗಿದ ಪೊಲೀಸ್​ ಪೇದೆ ಹೋಟೆಲ್​ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

ಮುತ್ತು ಎಂಬ ಹೆಸರಿನ ಪೊಲೀಸ್​​ ಪೇದೆ ರಾತ್ರಿ 10.21ರ ಸುಮಾರಿಗೆ ಶ್ರೀ ರಾಜ ಹೋಟೆಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಪೊಲೀಸ್​ ಎಂಟ್ರಿ ಕೊಡುವ ಹೊತ್ತಿಗೆ ಹೋಟೆಲ್​ನ ಶಟರ್​ ಅರ್ಧ ತೆರೆದಿತ್ತು. ಹೋಟೆಲ್​ನ ಒಳಗಡೆ ಸ್ವಲ್ಪ ಮಂದಿ ಗ್ರಾಹಕರೂ ಸಹ ಇದ್ದರು. ಪೊಲೀಸ್​ ಬರ್ತಿದ್ದಂತೆ ಗ್ರಾಹಕರು ಹೊರಗೆ ಹೋಗಿದ್ದಾರೆ. ಪೊಲೀಸ್​, ಮಹಿಳೆ ಸೇರಿದಂತೆ ಹೋಟೆಲ್​ನ ಸಿಬ್ಬಂದಿಗೆ ಲಾಠಿ ಬೀಸಿದ್ದು ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಮಹಿಳೆ ಸೇರಿದಂತೆ ಐವರಿಗೆ ಈ ಘಟನೆಯಿಂದ ಗಾಯಗಳಾಗಿದೆ. ಈ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಕೊರೊನಾ ನಿಯಂತ್ರಣಕ್ಕಾಗಿ ತಮಿಳುನಾಡು ಸರ್ಕಾರ ರೆಸ್ಟಾರೆಂಟ್​, ಫುಡ್​ ಕೋರ್ಟ್ಸ್​, ಚಹ ಅಂಗಡಿಗಳನ್ನ ರಾತ್ರಿ 11 ಗಂಟೆಗೆ ಬಂದ್​ ಮಾಡುವಂತೆ ಆದೇಶ ನೀಡಿದೆ.

ಈ ಸಂಬಂಧ ಹೋಟೆಲ್​ ಮಾಲೀಕ ಬಿ. ಮೋಹನರ್​ ಕೊಯಂಬತ್ತೂರು ನಗರ ಕಮಿಷನರ್​ಗೆ ದೂರನ್ನ ನೀಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...